ಹುಬ್ಬಳ್ಳಿ : ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ೧೧೫ ನೇ ಜಯಂತ್ಯೋತ್ಸವದ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಮಗಾರ ಹರಳಯ್ಯ, ಸಮತಾ ಸೇನಾ, ಶ್ರೀ ಭುವನೇಶ್ವರಿ ಸೇವಾ ಸಂಘ, ಕರ್ನಾಟಕ ರಕ್ಷಣಾ ಸೇನೆ, ಲಿಡಕರ್ ಕುಟೀಕಾರರ ಸಂಘ, ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ವತಿಯಿಂದ ಬೈಕ್ ರ್ಯಾಲಿ ರ್ಯಾಲಿ ಮೂಲಕ ಡಾ. ಬಾಬುಜೀ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಇಂಡಿಪಂಪ್, ಜೈಭೀಮ್ ವೃತ್ತ, ಡಾಕಪ್ಪ ವೃತ್ತ, ಮರಾಠಾ ಗಲ್ಲಿಯ ಸ್ಟೇಷನ್ ರಸ್ತೆ ಮೂಲಕ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ, ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಪುಷ್ಪಾರ್ಚನೆ, ವೀರರಾಣಿ ಚೆನ್ನಮ್ಮನ ಪ್ರತಿಮೆಗೆ ಪುಷ್ಪಾರ್ಚನೆ, ಶ್ರೀ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೂಲಕ ನಗರದ ಇಂದಿರಾ ಗಾಜಿನ ಮನೆಯಲ್ಲಿರುವ ಡಾ. ಬಾಬುಜೀ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಬೈಕ್ ರ್ಯಾಲಿ ಸಮಾಪ್ತಿಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಮಾತನಾಡಿ, ಹಸಿರು ಕ್ರಾಂತಿಯ ಹರಿಕಾರರಾದ ಡಾ. ಬಾಬು ಜಗಜೀವನರಾಮ್ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರ. ಅವರ ತೋರಿದ ಮಾರ್ಗದರ್ಶನದಲ್ಲಿ ನಾವು ನಡೆಯಬೇಕಿದೆ ಎಂದ ಅವರು ಡಾ. ಬಾಬುಜೀ ಅವರಿಗೆ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ದೇಶದ ಪ್ರಮುಖ ನಗರ ರಸ್ತೆಗಳಿಗೆ ಬಾಬುಜೀ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದರು. ಇನ್ನೂ ಬೈಕ್ ರ್ಯಾಲಿ ಯಶಸ್ವಿಗೊಳಿಸಿದಕ್ಕೆ ಧನ್ಯವಾದಗಳು ಎಂದರು.
ಸುರೇಶ ಗೋಕಾಕ್ ಹಾಗೂ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರ ಹಸಿರು ಕ್ರಾಂತಿ ಹರಿಕಾರ ಅವರು ಸಮಾಜಕ್ಕೆ ನೀಡಿದ ಕೊಡುಗೆ ಹಾಗೂ ಅವರ ಸಾಧನೆಯನ್ನು ಸ್ಮರಿಸಿದರು.
ಈ ವೇಳೆಯಲ್ಲಿ ಮಹೇಶ ದಾಬಡೆ, ಪರಶುರಾಮ ಅರಕೇರಿ, ಮಂಜಣ್ಣ ಉಳ್ಳಿಕಾಶಿ, ಲೋಹಿತ್ ಗಾಮನಗಟ್ಟಿ ಸೇರಿದಂತೆ ಉಪಸ್ಥಿತರಿದ್ದರು.