ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ನನ್ನ ಬದಲಾವಣೆಯಿಂದ ಕಾಣದ ಕೈವಾಡದಿಂದ ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತದೆ ಎಂದು ಕಾಂಗ್ರೆಸ್ ಯುವ ಮುಖಂಡ ಸಾಗರ ಹಿರೇಮನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡುರುವ ಅವರು, ಸೆಂಟ್ರಲ್ ವಿಧಾನಸಭಾ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದ ನಾನು ಪಕ್ಷದ ಹಿರಿಯ ನಾಯಕ ಮಾರ್ಗದರ್ಶನ ಹಾಗೂ ಜಿಲ್ಲಾ ಅಧ್ಯಕ್ಷರು ಸೇರಿದಂತೆ ಸ್ಥಳೀಯ ನಾಯಕರ ಅಣತಿಯಂತೆ ಪಕ್ಷದ ಸಂಘಟನೆ ಮಾಡಿದ್ದೇನೆ. ಆದರೆ ಏಕಾಏಕಿ ಬದಲಾವಣೆ ಹಿಂದೆ ಯಾರ ಪಿತೂರಿ ಅಡಗಿದೆ ಗೊತ್ತಿಲ್ಲ.ಆದರೆ ನಿಜಕ್ಕೂ ಈ ಬದಲಾವಣೆ ಒಳ್ಳೆಯ ಬೆಳವಣಿಗೆ ಅಲ್ಲಾ
ಸೆಂಟ್ರಲ್ ವಿಧಾನಸಭಾ ಕಾಂಗ್ರೆಸ್ ಪ್ರಮುಖ ನಾಯಕರು ಹಾಗೂ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಡಾ.ಮಹೇಶ್ ನಾಲವಾಡ, ಶಂಕರಣ್ಣ ಮುನವಳ್ಳಿ ಅವರು ಪಕ್ಷದ ತೊರೆದು ಬಿಜೆಪಿ ಸೇರಿದರು. ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವವನ್ನೇ ಕಳೆದುಕೊಂಡಿದೆ ಎಂಬ ಭಾವನೆ ಇಲ್ಲಿನ ಮತದಾರರಲ್ಲಿ ಕೇಲವರು ಸಹ ಮೂಡಿಸಿದ್ದರು ಸಹ ನಾನು ಸಂಘಟನೆಗೆ ಶ್ರಮಿಸಿದ್ದೆ ಎಂದರು.
