ಹುಬ್ಬಳ್ಳಿ : ಪತ್ರಕರ್ತ ರಾಜು ಮುದಗಲ್ ಸಾರಥ್ಯದ ದಿ ನ್ಯೂಸ್ ಒನ್ ಕನ್ನಡ ಚಾನೆಲ್ ಇಂದು ಮಲ್ಲಿಕಾರ್ಜುನ ಆವೆನ್ಯುದಲ್ಲಿನ ಕಚೇರಿಯಲ್ಲಿ ಲೋಕಾರ್ಪಣೆಗೊಂಡಿತು.
ಉದ್ಘಾಟನೆ ಸಮಾರಂಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ಉಪನಗರ ಇನ್ಸಪೆಕ್ಟರ್ ರವಿಚಂದ್ರ ಡಿ.ಬಿ, ಅಲ್‌ತಾಜ್ ಹೊಟೆಲ್ ಮಾಲಕ ಅಲ್ತಾಫ್ ಬೇಪಾರಿ, ಉತ್ತರ ಕರ್ನಾಟಕ ಜನಶಕ್ತಿ ಸೇನಾದ ಎಸ್ ಎಸ್ ಶಂಕ್ರಣ್ಣ, ಸಮಾಜ ಸೇವಕರಾದ ಪರಶುರಾಮ ದಿವಾನದ, ವಿಜಯಕುಮಾರ ಅಪ್ಪಾಜಿ, ಉದ್ಯಮಿ ಸಂತೋಷ ಶೆಟ್ಟಿ, ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದ ಸುರೇಶ ಗೋಕಾಕ ಡಾ.ವಿರೇಶ ಹಂಡಗಿಸೇರಿದಂತೆ ಅನೇಕ ಗಣ್ಯರು ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು ಹೆಸರೇ ಹೇಳುವಂತೆ ನ್ಯೂಜ್ ಒನ್ ಅವಳಿನಗರದ ಹಾಗೂ ಜಿಲ್ಲೆಯ ನಂಬರ್ ಒನ್ ಚಾನೆಲ್ ಆಗಿ ಇಲ್ಲಿನ ಸಮಸ್ಯೆಗಳಿಗೆ ಕೈಗನ್ನಡಿಯಾಗುವುದರೊಂದಿಗೆ ಸಮಾಜ ಮುಖಿ ಕೆಲಸಗಳ ಬೆಳಕು ಚೆಲ್ಲಲಿ ಎಂದು ಶುಭ ಹಾರೈಸಿದರು.
ಪತ್ರಿಕಾ ಮಾಧ್ಯಮದ ಮಿತ್ರರು,ವಿವಿಧ ಉದ್ಯಮಿಗಳು, ಸಮಾಜ ಸೇವಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.