ಹುಬ್ಬಳ್ಳಿ : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ್ದರು. ಕಪಿಲ್ ದೇವ್ ಅವರನ್ನು ನೋಡಿದ ಅಭಿಮಾನಿಗಳು ಅವರ ಜೊತೆ ಫೋಟೋ ತಗೆದುಕೊಳ್ಳಲು ಮುಗಿ ಬಿದ್ದ ಪ್ರಸಂಗ ನಡೆಯಿತು.
ಹೌದು. ನಗರದ ಟೈಕಾನ್ ಸಮಾವೇಶದಲ್ಲಿ “ಇವನಿಂಗ್ ವಿತ್ ಲೆಜೆಂಡ್ ” ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದರು. ನಗರದ ನವೀನ್ ಹೊಟೇಲ್ ಸಭಾಂಗಣಕ್ಕೆ ಆಗಮಿಸುತ್ತಿದಂತೆ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ಅವರನ್ನು ಸುತ್ತುವರೆದರು. ಕೆಲವರು ಫೋಟೋ ತಗೆಸಿಕೊಂಡರೆ, ಇನ್ನೂ ಕೆಲವರು ಆಟೋಗ್ರಾಫ್ ಪಡೆದುಕೊಂಡರು. ಅಭಿಮಾನಿಗಳನ್ನು ನಿಯಂತ್ರಿಸಲು ಕೆಲ ಕಾಲ ಆಯೋಜಕರು ಹರಸಾಹಸಪಟ್ಟರು.