ಹುಬ್ಬಳ್ಳಿ : ಬಿಆರ್ ಟಿಎಸ್ ಬಸ್ ಗುದ್ದಿದ ಪರಿಣಾಮ ಎಮ್ಮೆಯ ಕೊಂಬು ಮುರಿದಿರುವ ಘಟನೆ ನಗರ್ ಲ್ಯಾಮಿಂಗ್ಟನ್ ರಸ್ತೆ ಬಳಿ ನಡೆದಿದೆ.
ಎಮ್ಮೆ ಮೇಯಿಸಲು ಹೊಡೆದುಕೊಂಡು ಹೋಗುತ್ತಿರುವಾಗ ವೇಗವಾಗಿ ಬಙದ ಬಿ ಆರ್ ಟಿಎಸ್ ಬಸ್ ಎಮ್ಮೆಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಎಮ್ಮೆಯ ಒಂದು ಕೊಂಬು ಕಿತ್ತು ಬಂದು ರಕ್ತ ಸುರಿಯಲಾರಂಭಿಸಿದೆ. ಇದನ್ನು ಕಂಡ ಪಕ್ಕದ ಎಮ್ಮೆಗಳು ಬಸ್ ಸುತ್ತುವರೆದು ಬಸ್ ಗೆ ಪ್ರತಿರೋಧ ತೋರಿದ ಘಟನೆ ಪ್ರಾಣಿಗಳ ಒಗಟ್ಟಿಗೆ ಹಿಡಿದ ಕನ್ನಡಿಯಂತಿತ್ತು.
ಇನ್ನೂ ಕೊಂಬು ಮುರಿದಿದ್ದರಿಂದ ಎಮ್ಮೆಗೆ ಗಂಭೀರವಾಗಿ ಗಾಯಗಳಾಗಿದ್ದು, ಎಮ್ಮೆಯ ಮಾಲೀಕ ಬಸ್ ಚಾಲಕನೊಂದಿಗೆ ವಾಗ್ವಾದಕ್ಕೆ ಇಳಿದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಅಸ್ವಸ್ಥತವಾಗಿತ್ತು.
ಕೂಡಲೇ ಸ್ಥಳಕ್ಕೆ ಬಂದ ಸಂಚಾರಿ ಠಾಣೆ ಪೊಲೀಸರು ಹಾಗೂ ಉಪನಗರ ಠಾಣೆ ಪೊಲೀಸರು ವಾತಾವರಣವನ್ನು ತಿಳಿಗೊಳಿಸಿ ಬಸ್ಸು ಹಾಗೂ ಎಮ್ಮೆಗಳನ್ನು ಸ್ಥಳದಿಂದ ತೆರವುಗೊಳಿಸಿದರು.