ಹುಬ್ಬಳ್ಳಿ: ಧಾರವಾಡ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಮಾ. ೨೬ ರಂದು ಬೆಳಗ್ಗೆ ೯ರಿಂದ ಮಧ್ಯಾಹ್ನ ೨ ಗಂಟೆವರೆಗೆ ಧಾರವಾಡ ಪಿ.ಬಿ ರಸ್ತೆ ಟೋಲ ನಾಕಾ ಹತ್ತಿರದ ಮಾಡರ್ನ ಹಾಲ್ ನಲ್ಲಿ ಯುವ ವಿಕಲಚೇತನರ ೨ ನೇ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪ ಕೃಷ್ಣ ಲಮಾಣಿ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೨೫ ವರ್ಷ ದಿಂದ ವಿಕಲಚೇತರಿಗೆ ಉದ್ಯೋಗ, ನೆರವು ಸೇರಿದಂತೆ ಅನೇಕ ಸೇವೆ ಮಾಡುತ್ತಾ ಬಂದಿದೆ. ದೃಷ್ಟಿಹಿನ, ಅಂಗವಿಕಲ ಮತ್ತು ಹಿಂದೂಳಿದ ಜನರನ್ನು ಸಬಲೀಕರಣಗೊಳಿಸುವ ಕಾರ್ಯ ಮಾಡುತ್ತಿದೆ ಎಂದರು.
ಉದ್ಯೋಗ ಮೇಳಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ಜಗದೀಶ ಶೆಟ್ಟರ ಮತ್ತು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಭಾಗವಹಿಸುವರು ಎಂದು ತಿಳಿಸಿದರು.
ಎಸ್.ಎಸ್.ಎಲ್. ಸಿ, ಪಿಯುಸಿ, ಡಿಪ್ಲೊಮಾ ಅಥವಾ ಪದವಿ ವಿದ್ಯಾರ್ಹತೆ ಹೊಂದಿರುವ ೧೮ ರಿಂದ ೩೫ ವಯಸ್ಸಿ ಸುಮಾರು ೫೦೦ ಕ್ಕೂ ಹೆಚ್ಚು ನುರಿತ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಉದ್ಯೋಗ ಮೇಳದಲ್ಲಿ ೨೫ ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಭಾಗವಹಿಸಿ ಉತ್ತರ ಕರ್ನಾಟಕ ಭಾಗದ ಎಲ್ಲ ವಿಕಲಚೇತನರು ಉದ್ಯೋಗ ಪಡೆಯಬೇಕು ಎಂಬುದು ಸಂಸ್ಥೆಯ ಗುರಿಯಾಗಿದೆ ಎಂದು ಹೇಳಿದರು.
ಸಂಸ್ಥೆ ಟ್ರಸ್ಟಿ ಉದಯಕುಮಾರ ಬಾಗಣ್ಣವರ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಪ್ರಾಣೇಶ ಹೇಮಾಂದ್ರಿ ಇದ್ದರು.