ಹುಬ್ಬಳ್ಳಿ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ತನ್ನ ಪತ್ನಿಯ ಮೇಲೆ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಮೇಲೆ ಸಣ್ಣ ಪುಟ್ಟ ಕೇಸ್ ದಾಖಲಿಸಿದರೇ ನಾವು ಸುಮ್ಮನಿರಲ್ಲಾ, ಆತ ಜೈಲಿನಿಂದ ಹೊರಗಡೆ ಬಂದ ನಂತರ ಅವನನ್ನು ಕೊಚ್ಚಿ ಹಾಕ್ತಿವಿ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ತನ್ನ ಪತ್ನಿಯ ಮೇಲೆ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಹಲ್ಲೆ ಒಳಗಾದ ಅಪೂರ್ವ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿಭೇಟಿ ಮಾಡಿ, ಆರೋಗ್ಯ ವಿಚಾರಿಸಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಲವ್ ಜಿಹಾದ್ ಪ್ರಕರಣವಾಗಿದ್ದು ಇದೊಂದು ಉತ್ತಮ ಉದಾಹರಣೆಯಾಗಿದೆ.
ಅಪೂರ್ವ ತನ್ನ ಪ್ರೀಯತಮ ಇಜಾಜ್ ಶಿರೂರ ಜೊತೆಗೆ ೨೦೧೮ ರಂದು ಮದುವೆಯಾಗಿದ್ದರೆನ್ನಲಾಗಿದ್ದು, ೨ ದಿನಗಳ ಹಿಂದೆ ಗದಗ ಪಟ್ಟಣದಲ್ಲಿ ಮಚ್ಚಿನಿಂದ ಕೊಚ್ಚಿ ೨೩ ಬಾರಿ ಮನಬಂದಂತೆ ಇರಿದಿದ್ದು ಭೀಕರವಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.
ಅಪೂರ್ವ ಎಂಬ ಹೆಣ್ಣು ಮಗಳನ್ನು ಮತಾಂತರ ಮಾಡಿದ್ದಾರೆ. ಅಪೂರ್ವ ಎಂಬ ಹೆಸರನ್ನು ಅರ್ಫಾ ಬಾನು ಎಂದ ಬದಲಿಸಿದ್ದ ಅಲ್ಲದೇ ಇವರ ದಾಂಪತ್ಯದ ಸಾಕ್ಷಿಯಾಗಿ ಮಗು ಕೂಡಾ ಇದೆ.
ಈ ಹಿಂದೆ ಆತನಿಗೆ ಮದುವೆಯಾಗಿ ಮೂವರು ಮಕ್ಕಳು ಇದ್ದರೂ ಕೂಡಾ ಅಪೂರ್ವಳನ್ನು ಪ್ರೀತಿಸಿ ಬ್ಲ್ಯಾಕ್ ಮೇಲೆ ಮಾಡುತ್ತಿದ್ದ ಎಂದು ಆರೋಪಿಸಿದ ಅವರು ಇಜಾಜ್ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಹದಿಹರೆಯದ ಹೆಣ್ಣು ಮಕ್ಕಳು ಪ್ರೀತಿಯಲ್ಲಿ ಬಿಳೋ ಮುಂಚೆ ಅಪೂರ್ವ ಘಟನೆ ನೆನಪಿಸಿಕೊಳ್ಳಬೇಕು.
ಆರೋಪಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದ ಅವರು ಆ ಮನೆಯನ್ನು ಮೌಲ್ವಿಗಳು ಬಹಿಷ್ಕಾರ ಹಾಕಬೇಕೆಂದು ಆಗ್ರಹಿಸಿದರು.