ಹುಬ್ಬಳ್ಳಿ: ಮುತ್ತಮ್ಮ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಗ್ರೋಯಿಂಗ್ ಬಡ್ಸ್ ಕಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಭೂಮಿಪೂಜಾ ಕಾರ್ಯಕ್ರಮವನ್ನು ಶ್ರೀಮದ್ ರಂಭಾಪುರಿ ವೀರಸಿಂಹಾಸನಾದೀಶ್ವರ ಸ್ವಾಮೀಜಿ ಅವರು ನೆರೆವೇರಿಸಿದರು.
ಹುಬ್ಬಳ್ಳಿ ನಗರದ ಕುಸುಗಲ್ ಗ್ರಾಮ ಬಳಿಯ ಮಹಾದುರ್ಗಾ ಕಾಲೋನಿಯಲ್ಲಿ ಜರುಗಿತು . ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾಳೆಹೊನ್ನೂರಿನ ಡಾ. ವೀರಸೋಮೇಶ್ವರ ರಾಜದೇಶಿಕೆಂದ್ರ ಶಿವಾಚಾರ್ಯ ಭಗವತ್ಪಾದರು, ಸಾನಿಧ್ಯ ಸುಳ್ಳ ಗ್ರಾಮದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್, ಶಿವಾನಂದ ಕರಿಗಾರ, ಹಾಗೂ ಕಾರ್ಯಕ್ರಮದಲ್ಲಿ ಟ್ರಸ್ಟ ನ ಅಧ್ಯಕ್ಷ ಹನುಮಂತಪ್ಪ ಭೀಮಪ್ಪ ಮ್ಯಾಗೇರಿ, ಉಪಾಧ್ಯಕ್ಷ ಪ್ರೇಮಾ ಹನುಮಂತ ಮ್ಯಾಗೇರಿ, ಶಿಕ್ಷಕ ವೃಂದ, ಮಹಾದುರ್ಗಾ ಕಾಲೋನಿ ಹಿತಾಭಿವೃದ್ಧಿ ಸಂಘದ ಅಧ್ಯಕ್ಷರು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು