ಹುಬ್ಬಳ್ಳಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿರುವ 2022-23 ನೇ ಸಾಲಿನ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕನಿಷ್ಠ 10 ಸಾವಿರ ಕೋಟಿ ಮೀಸಲಿಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಸದಸ್ಯರಾದ ಅಕ್ರಮ್ ಹಾಸನ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಈ ಬಾರಿಯ ಬಜೆಟ್ ನಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪ್ರಾಥಮಿಕ ಶಾಲೆಯಿಂದ ಹಿಡಿದು ಉನ್ನತ ವ್ಯಾಸಂಗದವರೆಗೂ ಸುಸಜ್ಜಿತ ಕಟ್ಟಡಗಳು, ಮೂಲಭೂತ ಸೌಕರ್ಯಗಳು, ಶಿಕ್ಷಕರ ನೇಮಕಾತಿ, ಪೀಠೋಪಕರಣ ಹಾಗೂ ಆಟೋಪಕರಣಗಳು ಸೇರಿದಂತೆ ಎಲ್ಲ ಸೌಲಭ್ಯ ನೀಡಬೇಕು. ಅಮೆರಿಕಾ ಮಾದರಿಯಲ್ಲಿ ರಾಜ್ಯದಲ್ಲಿ ಏರೋಸ್ಪೇಸ್ ಮತ್ತು ಏರೋನಾಟಿಕಲ್ ಸಂಶೋಧನಾ ಕೇಂದ್ರವನ್ನು ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಸ್ಥಾಪಿಸಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗಳನ್ನು ಎಲ್ಲ ತಾಲೂಕುಗಳಲ್ಲಿ ಸ್ಥಾಪಿಸಬೇಕು. ಇದಲ್ಲದೇ ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಸೇರಿದಂತೆ ಬಡ ಮತ್ತು ಮಧ್ಯಮ ವರ್ಗದವರಿಗೆ ಪೂರಕವಾದ ಬಜೆಟ್ ಮಂಡಿಸಬೇಕು. ಈ ಬಾರಿ ಜನಪರ ಬಜೆಟ್ ಆಗಿರಬೇಕು ತಿಳಿಸಿದರು.
ಇದಲ್ಲದೇ ಜಸ್ಟೀಸ್ ಸದಾಶಿವ ಆಯೋಗ, ಕಾಂತರಾಜ್ ಆಯೋಗದ ವರದಿ ಬಿಡುಗಡೆ ಆಗಬೇಕು. ಆದಿವಾಸಿ , ಅಲೆಮಾರಿ, ಬುಡಕಟ್ಟುಗಳ ಕಲ್ಯಾಣ ಕಾರ್ಯಕ್ರಮ ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ, ನೆರೆ ಮತ್ತು ಬರ ಪರಿಹಾರಕ್ಕೆ ಕನಿಷ್ಠ ರೂ. 30 ಸಾವಿರ ಕೋಟಿ ಕಾಯ್ದಿರಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಹಿಳಾ ಸಬಲೀಕರಣ ಕೌಶಲ್ಯಭಿವೃದ್ಧಿ, ಸಾರಿಗೆ, ಕಾರ್ಮಿಕ ಇಲಾಖೆ, ಇಂಧನ ಇಲಾಖೆ, ಕೃಷಿ, ಆಡಳಿತದಲ್ಲಿ ಸುಧಾರಣೆ, ಕೈಗಾರಿಕಾ, ಉದ್ಯೋಗ ಕ್ಷೇತ್ರಗಳಲ್ಲಿ ಕ್ಷೇತ್ರಗಳಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಇನ್ನೂ ಹಿಜಾಬ್ ಬಗ್ಗೆ ಮಾತಾನಾಡಿದ ಅವರು ರಾಜಕೀಯ ಪ್ರೇರಿತವಾಗಿ ಈ ಹಿಜಾಬ್ ಗದ್ದಲ ನಡೆದಿದೆ.
ಹುಬ್ಬಳ್ಳಿ- ಹಿಜಾಬ್ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ ಹಿಜಾಬ್ ಸಂಕೇತ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಸಹ ಅದೇ ರೀತಿ ಧರಿಸುತ್ತಾರೆ ಎಂದು ಎಸ್ ಡಿಪಿಐ ಅಕ್ರಮ ಹಸನ್ ಹೇಳಿದರು.
ಈ ಕುರಿತು ಹಿಜಾಬ್ ಧರಿಸುವುದು ಐತಿಹಾಸಿಕವಾದ ಸಂಕೇತವಾಗಿದ್ದು ಈಗಾಗಲೇ ಇದೊಂದು ಸಾಮಾನ್ಯವಾದ ಸಮವಸ್ತ್ರ ಆದ್ದರಿಂದ ಈ ಕುರಿತು ಅನಗತ್ಯವಾದ ವಿವಾದ ಬೇಡ ಎಂದರು. ಇನ್ನು ಇದೇ ವೇಳೆ ರಾಯಚೂರಿನಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಅಂಬೇಡ್ಕರ್ ಕುರಿತು ಮಾಡಿದ ಅವಮಾನ ಮುಚ್ಚಿ ಹಾಕಲು ಹಾಗೂ ಹಸನಬ್ಬ ಹಾಜನಬ್ಬ ಅವರ ಅಶ್ಲೀಲ ಸಿಡಿ ಪ್ರಕರಣ ತಿರುಚಲು ಹಿಜಾಬ್ ಪ್ರಕರಣವನ್ನ ವಿವಾದಕ್ಕೆ ಶಾಸಕ ರಘುಪತಿ ಭಟ್ ತರುತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಇರ್ಷಾದ್ ಅಹ್ಮದ್ ಅತ್ತಾರ, ಜಿಲ್ಲಾ ಉಪಾಧ್ಯಕ್ಷ ಸಮೀರ್ ಬೆಟಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ನಾಲಬಂಧ, ಜಿಲ್ಲಾ ಸದಸ್ಯ ಮೊಹಮ್ಮದ್ ರಫೀಕ್ ಸೇರಿದಂತೆ ಮುಂತಾದವರು ಇದ್ದರು.