ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಅಸಿಂಧುಗೊಳಿಸಬೇಕು ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಚುನಾವಣೆ ಸಂವಿಧಾನಬದ್ಧವಾಗಿ ನಡೆದಿಲ್ಲ
ವಾರ್ಡ್ ವಿಂಗಡಣೆ, ಮೀಸಲಾತಿ ಇತ್ಯಾದಿಗಳ ಸಂವಿಧಾನಬದ್ಧವಾಗಿ ನಡೆದಿಲ್ಲ
ಈ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು
ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ ವೇದಿಕೆಯ ಮುಖಂಡ ಬಸವರಾಜ ಭಜಂತ್ರಿ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
2011 ರ ಜನಗಣತಿ ಅನ್ವಯ ವಾರ್ಡ್ ಗಳನ್ನು ವರ್ಗೀಕರಿಸಿಲ್ಲ. ಇದರಿಂದ ಪರಿಶಿಷ್ಟರು, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಅನ್ಯಾಯವಾಗಿದೆ.
ಹೀಗಾಗಿ ಮಹಾನಗರ ಪಾಲಿಕೆ ಚುನಾವಣೆಯನ್ನು ಅಸಿಂಧುಗೊಳಿಸಬೇಕು
ವೈಜ್ಞಾನಿಕವಾಗಿ ವಾರ್ಡ್ಗಳನ್ನು ಮರು ವಿಂಗಡನೆ ಮಾಡಿ ಮೀಸಲಾತಿ ಸರಿಪಡಿಸಿ ಚುನಾವಣೆ ನಡೆಸಬೇಕು.
ಈ ಸಂಬಂಧ ಕರ್ನಾಟಕ ಹೈಕೋರ್ಟ್ ಪೀಠದ ಮೊರೆ ಹೋಗಿದ್ದೇವೆ.
ಶೀಘ್ರವೇ ನಮಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.