ಹುಬ್ಬಳ್ಳಿ: ಮಹಾಮಾರಿ ಕೋವಿಡ್-19 ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸಿ ಯಾರೂ ಸಹ ತಮ್ಮ ಕುಟುಂಬವನ್ನು ಕಳೆದುಕೊಳ್ಳಬಾರದು ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.
ಸೋಮವಾರ ತಮ್ಮ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕೋವಿಡ್-19 ಸೋಂಕಿನಿಂದ ಮೃತಪಟ್ಟ ಕ್ಷೇತ್ರ ವ್ಯಾಪ್ತಿಯ 47 ಬಿಪಿಎಲ್ ಕುಟುಂಬಗಳಿಗೆ ತಲಾ 1 ಲಕ್ಷ ರೂ.ಗಳ ಪರಿಹಾರ ಧನದ ಚೆಕ್ ವಿತರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಜೀವನದಲ್ಲಿ ಕುಟುಂಬವು ಅತ್ಯಂತ ಮಹತ್ತರವಾಗಿದ್ದು, ನಮ್ಮ ನಿರ್ಲಕ್ಷ್ಯದಿಂದ ಸದಸ್ಯರನ್ನು ಕಳೆದುಕೊಳ್ಳುವಂತಾಗಬಾರದು. ಪ್ರೀತಿ ಪಾತ್ರರಾದ ಸದಸ್ಯರನ್ನು ಕಳೆದುಕೊಂಡಾಗ ಆಗುವ ದುಃಖ ಅಷ್ಟಿಷ್ಟಲ್ಲ ಎಂದರು.
ಪ್ರತಿಯೊಬ್ಬರೂ ಸೋಂಕಿನ ಬಗ್ಗೆ ಎಚ್ಚರ ವಹಿಸಿ,ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ತಪ್ಪದೇ ಲಸಿಕೆಗಳನ್ನು ಪಡೆಯಬೇಕು. ಕೋವಿಡ್-19 2ನೇ ಅಲೆ ಬಳಿಕ ಇದೀಗ ಓಮಿಕ್ರಾನ್ ಹಾವಳಿ ಹೆಚ್ಚುತ್ತಿದ್ದು, ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು ಎಂದ ಶಾಸಕರು, ಕುಟುಂಬ ಸದಸ್ಯರು ಆತ್ಮಸ್ಥೈರ್ಯ ಕಳೆದುಕೊಳ್ಳದೇ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಮೃತ ಕುಟುಂಬಕ್ಕೆ ಧೈರ್ಯ ತುಂಬಿದರು.
ಪಾಲಿಕೆ ಸದಸ್ಯರಾದ ಇಲಿಯಾಸ್ ಮನಿಯಾರ್, ದೊರೆರಾಜ್ ಮಣಿಕುಂಟ್ಲ, ಮಂಜುಳಾ ಜಾಧವ್ಮಾ, ಮಾಜಿ ಸದಸ್ಯರಾದ ಶಿವನಗೌಡ ಹೊಸಮನಿ, ಮೋಹನ ಅಸುಂಡಿ, ಮುಖಂಡರಾದ ಪ್ರಕಾಶ ಬುರಬುರೆ, ಸೈಯದ್ ಸಲೀಂ ಮುಲ್ಲಾ, ಮುಸ್ತಾಕ್ ಮುದಗಲ್, ಬಾಬಾಜಾನ್ ಕಾರಡಗಿ, ಕುಮಾರ ಕುಂದನಹಳ್ಳಿ, ಯಲ್ಲಪ್ಪ ಮೆಹರವಾಡೆ, ಉಪ ತಹಶೀಲ್ದಾರ್ ಎ.ಎಸ್.ಪಠಾಣ,
ಗ್ರಾಮ ಲೆಕ್ಕಾಧಿಕಾರಿಗಳಾದ
ಗುರುನಾಥ ಸುಣಗಾರ,
ಇಮಾರತವಾಲೆ ಹಾಗೂ ಗ್ರಾಮ ಸಹಾಯಕರು, ಇತರರು ಇದ್ದರು.