ಹುಬ್ಬಳ್ಳಿ : ಹುಬ್ಬಳ್ಳಿ ಬಿ.ವ್ಹಿ.ಬಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲ ಹಿರಿಯ ನಾಗರಿಕರ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಹಿರಿಯ ನಾಗರಿಕರ ಕ್ರೀಡಾಕೂಟ ಹಾಗೂ ಸಾಂಸ್ಕ್ರತಿಕ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ತುಂತುರು ಮಳೆ ವಿದ್ಯಕ್ತವಾಗಿ ಚಾಲನೆ ನೀಡಿದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ.ಹುಲಗೆಮ್ಮ ಕುಕನೂರ ಸಾಂಕೇತಿಕವಾಗಿ ಚಾಲನೆ ನೀಡಿದರು. ಮಳೆಯ ನಡುವೆಯೂ ಹಿರಿಯ ನಾಗರಿಕರು ಉತ್ಸಾಹದಿಂದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡರು.
ನೂರು ಹಾಗೂ ಐವತ್ತು ಮೀಟರ್ ನಡಿಗೆ ಸ್ಪರ್ಧೆ, ರಿಂಗ್, ಕೇರಂ, ಏಕಪಾತ್ರಾಭಿನಯ ಗಾಯನ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ಹಿರಿಯ ನಾಗರಿಕರಿಗಾಗಿ ಏರ್ಪಾಡಿಸಲಾಗಿತ್ತು.
ವಿಕಲಚೇನರು ಹಾಗೂ ಹಿರಿಯ ನಾಗರಿಕ ಕಲ್ಯಾಣಾಧಿಕಾರಿ.ಡಿ.ಎಸ್.ಮೂಲಿಮನಿ, ನಿವೃತ್ತ ಸರ್ಕಾರ ಹಾಗೂ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಬಿ.ಎ.ಪಾಟೀಲ, ಐ ಕೆ ಲಕ್ಕುಂಡಿ ಕಿಮ್ಸ್ ವೈದ್ಯ ಸುನೀಲ ಗೋಕಲೇ, ಡಾ.ಗುರುರಾಜ ದೇಸಾಯಿ ಸೇರಿದಂತೆ ಹಲವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
*ಸಾಂಸ್ಕೃತಿಕ ಹಾಗೂ ಕ್ರೀಡಾಕೂಟ ಸ್ಪರ್ಧಾ ವಿಜೇತರ ವಿವರ:*
ಪುರುಷರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಏಕಪಾತ್ರ ಅಭಿನಯದಲ್ಲಿ 60 ರಿಂದ 69 ವರ್ಷದೊಳಗಿನ ಗುಂಪಿನಲ್ಲಿ ಈರಪ್ಪ ಕಾಡಪ್ಪನವರ ಪ್ರಥಮ, ಮೋಹನ ದ್ವೀತಿಯ ಹಾಗೂ ಎಲ್.ಆರ್ ಕೇಶಾಚಲ ತೃತೀಯ, ಗಾಯನ ಸ್ಪರ್ಧೆಯಲ್ಲಿ ಶಂಕರ ಮಂಗಳಗಟ್ಟಿ ಪ್ರಥಮ, ಎಸ್ ಎಸ್ ಕರಡಿ ದ್ವೀತಿಯ ಹಾಗೂ ನಿಂಗಪ್ಪ ವೈಯಕೇಂಡ ತೃತೀಯ ಬಹುಮಾನ ಪಡೆದಿದ್ದಾರೆ.
70 ರಿಂದ 79 ವರ್ಷದೊಳಗಿನ ಏಕಪಾತ್ರ ಅಭಿನಯದಲ್ಲಿ ಫಕ್ಕೀರಪ್ಪ ನರ್ತಿ ಪ್ರಥಮ ಹಾಗೂ ಮೋಹನ ಹರಪ್ಪನಳ್ಳಿ ದ್ವೀತಿಯ, ಗಾಯನ ಸ್ಪರ್ಧೆಯಲ್ಲಿ ಸಿದ್ದಲಿಂಗಯ್ಯ ಗುಡ್ಡದಮರ ಪ್ರಥಮ, ಫಕ್ಕೀರಪ್ಲ ನರ್ತಿ ದ್ವೀತಿಯ ಹಾಗೂ ಯಶವಂತ ಅಳಗವಾಡಿ ತೃತೀಯ ಸ್ಥಾನ ಪಡೆದಿದ್ದಾರೆ.
80 ವರ್ಷ ಮೇಲ್ಪಟ್ಟವರ ಗುಂಪಿನಲ್ಲಿ ಏಕಪಾತ್ರ ಅಭಿನಯದಲ್ಲಿ ಬಿಸಿ ಹಿರೇಮಠ ಪ್ರಥಮ ಹಾಗೂ ಗಾಯನ ಸ್ಪರ್ಧೆಯಲ್ಲಿ ಬರದ್ವಾಡ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಹಿಳೆಯರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಏಕಪಾತ್ರ ಅಭಿನಯದಲ್ಲಿ 60 ರಿಂದ 69 ವರ್ಷದೊಳಗಿನ ಗುಂಪಿನಲ್ಲಿ ಸುನಂದಾ ಬೆನ್ನಾಕ ಪ್ರಥಮ, ನೀತಾ ದೇಸಾಯಿ ದ್ವೀತಿಯ, ಗಾಯನ ಸ್ಪರ್ಧೆಯಲ್ಲಿ ಜಯಶ್ರೀ ಬಟ್ ಪ್ರಥಮ, ಜಯಶ್ರೀ ಹರ್ಲಾಪುರ ದ್ವೀತಿಯ ಹಾಗೂ ಶೋಭಾ ಸವದತ್ತಿ ತೃತೀಯ ಸ್ಥಾನ ಪಡೆದಿದ್ದಾರೆ.
70 ರಿಂದ 79 ವರ್ಷದ ಗುಂಪಿನಲ್ಲಿ ಏಕಪಾತ್ರ ಅಭಿನಯದಲ್ಲಿ ಎಸ್.ಎಮ್ ಗೀತಾ ಪ್ರಥಮ, ಆಯಿಶಾ ಎಮ್ ದ್ವೀತಿಯ, ಗಾಯನ ಸ್ಪರ್ಧೆಯಲ್ಲಿ ಅರುಣಾ ಕಿನಭಾಗ ಪ್ರಥಮ, ಕಲಾವತಿ ಬಿ. ದ್ವೀತಿಯ ಹಾಗೂ ಎಸ್.ಎಮ್ ಗೀತಾ ತೃತೀಯ ಸ್ಥಾನ ಪಡೆದಿದ್ದಾರೆ.
80 ವರ್ಷ ಮೇಲ್ಪಟ್ಟವರ ಗುಂಪಿನಲ್ಲಿ ಗಾಯನ ಸ್ಪರ್ಧೆಯಲ್ಲಿ ಗಂಗವ್ವ ಇಂಗಳಗಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಪುರುಷರ ಕ್ರೀಡಾಕೂಟದಲ್ಲಿ 60 ರಿಂದ 69 ವರ್ಷದ ಗುಂಪಿನ 100 ಮೀ. ನಡಿಗೆಯಲ್ಲಿ ರಾಜಶೇಖರ ಜಿ.ಟಿ ಪ್ರಥಮ, ಅಣ್ಣಪ್ಪ ಮನ್ನಿಕೇರಿ ದ್ವೀತಿಯ ಹಾಗೂ ವಸಂತ ಕುಸುಗಲ್ ತೃತೀಯ, ರಿಂಗನ್ನು ಬಕೆಟ್ನಲ್ಲಿ ಎಸೆಯುವುದರಲ್ಲಿ ಯಲ್ಲಪ್ಪ ನರ್ತಿ ಪ್ರಥಮ, ಎಸ್.ವಿ ಹಿರೇಮಠ ದ್ವೀತಿಯ, ಎ.ಎಪ್ ರೇಶ್ಮಿ ತೃತೀಯ ಹಾಗೂ ಕೇರಂನಲ್ಲಿ ಬಿ.ಎನ್ ನಾಗಭೂಷಣ ಪ್ರಥಮ, ವಸಂತ ಬಸ್ಮೆ ದ್ವೀತಿಯ ಹಾಗೂ ಅರುಣ ಮಹತ ತೃತೀಯ ಸ್ಥಾನ ಪಡೆದಿದ್ದಾರೆ.
70 ರಿಂದ 79 ವರ್ಷದ ಗುಂಪಿನ 100 ಮೀ. ನಡಿಗೆಯಲ್ಲಿ ಎವಿ ಶೇಖ್ ಪ್ರಥಮ, ವೆಂಕರೆಡ್ಡಿ ಕಿರೇಸೂರ್ ದ್ವೀತಿಯ ಹಾಗೂ ಈಶ್ವರಪ್ಪ ಕಂಪ್ಲಿ ತೃತೀಯ ಸ್ಥಾನ, ರಿಂಗನ್ನು ಬಕೆಟ್ನಲ್ಲಿ ಎಸೆಯುವುದರಲ್ಲಿ ಎವಿ ಶೇಖ್ ಪ್ರಥಮ, ಬಿ.ವಾಯ್ ಕೋಟಿ ದ್ವೀತಿಯ,ವೆಂಕರೆಡ್ಡಿ ಕಿರೇಸೂರ ತೃತೀಯ ಹಾಗೂ ಕೇರಂನಲ್ಲಿ ಶಿವಶರಣ ಪ್ರಥಮ, ಮಲ್ಲಿಕಾರ್ಜುನ ದ್ವೀತಿಯ, ಎಮ್.ಸಿ ರವದಿ ತೃತೀಯ ಸ್ಥಾನ ಪಡೆದಿದ್ದಾರೆ.
80 ವರ್ಷ ಮೇಲ್ಪಟ್ಟವರ ಗುಂಪಿನಲ್ಲಿ 100 ಮೀ. ನಡಿಗೆಯಲ್ಲಿ ಗರೀಬಸಾಬ ಸನದಿ ಪ್ರಥಮ, ಎಸ್.ಎ ಕುಂಬಾರ ದ್ವೀತಿಯ, ವಿ.ಜಿ ಪಾಟೀಲ ತೃತೀಯ, ರಿಂಗನ್ನು ಬಕೆಟ್ನಲ್ಲಿ ಎಸೆಯುವುದರಲ್ಲಿ ಪರಮೇಶ್ವರಪ್ಪ ಸಣ್ಮನಿ, ಎಸ್.ಎ ಕುಂಬಾರ ದ್ವೀತಿಯ, ಪಿಬಿ ಹಿರೇಮಠ ತೃತೀಯ ಹಾಗೂ ಕೇರಂನಲ್ಲಿ ಪಿಬಿ ಹಿರೇಮಠ ಪ್ರಥಮ, ಪಾಂಡುರಂಗ ಗಾಯಕವಾಡ ದ್ವೀತಿಯ ಸ್ಥಾನ ಪಡೆದಿದ್ದಾರೆ.
ಮಹಿಳೆಯರ ಕ್ರೀಡಾಕೂಟದಲ್ಲಿ 60 ರಿಂದ 69 ವರ್ಷದ ಗುಂಪಿನಲ್ಲಿ 100 ಮೀ. ನಡಿಗೆಯಲ್ಲಿ ಲಲಿತಾ ವಾಯಕೇಂಡ ಪ್ರಥಮ, ಆರ್ ಗಾಯತ್ರಿ ದ್ವೀತಿಯ, ಲೀಲಾವತಿ ಹೂಗಾರ ತೃತೀಯ, ರಿಂಗನ್ನು ಬಕೆಟ್ನಲ್ಲಿ ಎಸೆಯುವುದರಲ್ಲಿ ಲೀಲಾವತಿ ಹೂಗಾರ ಪ್ರಥಮ, ಲಲಿತಾ ವಾಯಕೇಂಡ್ ದ್ವೀತಿಯ, ಜಯಲಕ್ಷ್ಮೀ ಉಮಡಗಿ ತೃತೀಯ ಹಾಗೂ ಕೇರಂನಲ್ಲಿ ಆರ್. ಗಾಯತ್ರಿ ಪ್ರಥಮ, ಆರ್.ಬಿ ನವಲಗುಂದ ದ್ವೀತಿಯ, ಗೀತಾ ಚಳ್ಳಿಕೇರಿ ತೃತೀಯ ಸ್ಥಾನ ಪಡೆದಿದ್ದಾರೆ.
70 ರಿಂದ 79 ವರ್ಷದ ಗುಂಪಿನಲ್ಲಿ100 ಮೀ. ನಡಿಗೆಯಲ್ಲಿ ಅನುಸುಯಾ ಕನವಳ್ಳಿ ಪ್ರಥಮ, ವೈಶಾಲಿ ದ್ವೀತಿಯ, ಕಮಲಾಕ್ಷೀ ಹಿರೇಗೌಡರ ತೃತೀಯ, ರಿಂಗನ್ನು ಬಕೆಟ್ನಲ್ಲಿ ಎಸೆಯುವುದರಲ್ಲಿ ಲಕ್ಷ್ಮೀ ಮಂಗಳವಾಡೆ ಪ್ರಥಮ ವೈಶಾಲಿ ದ್ವೀತಿಯ, ಗಂಗಮ್ಮ ತೃತೀಯ ಹಾಗೂ ಕೇರಂನಲ್ಲಿ ಭವಾನಿ ಬಂಡಾರಿ ಪ್ರಥಮ ಹಾಗೂ ಗಂಗಮ್ಮ ದ್ವೀತಿಯ ಸ್ಥಾನ ಪಡೆದಿದ್ದಾರೆ.
80 ವರ್ಷ ಮೇಲ್ಪಟ್ಟವರ ಗುಂಪಿನಲ್ಲಿ 100 ಮೀ. ನಡಿಗೆಯಲ್ಲಿ ಉಷಾ ದೇಶಾಯಿ ಪ್ರಥಮ, ಶಾರದಾಬಾಯಿ ದ್ವೀತಿಯ, ರಿಂಗನ್ನು ಬಕೆಟ್ನಲ್ಲಿ ಎಸೆಯುವುದರಲ್ಲಿ ಉಷಾ ದೇಸಾಯಿ ಪ್ರಥಮ ಹಾಗೂ ಶಾರದಾಬಾಯಿ ದ್ವೀತಿಯ ಸ್ಥಾನ ಪಡೆದಿದ್ದಾರೆ.