Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ವಿಕಲಚೇತನರಿಗೆ ತ್ರಿಚಕ್ರ ಮೋಟಾರು ಸೈಕಲ್‌ಗಳ ವಿತರಣೆ

ವಿಕಲಚೇತನರಿಗೆ ತ್ರಿಚಕ್ರ ಮೋಟಾರು ಸೈಕಲ್‌ಗಳ ವಿತರಣೆ

Spread the love

ಹುಬ್ಬಳ್ಳಿ : ಹುಬ್ಬಳ್ಳಿ ಸರ್ಕ್ಯೂಟ್ ಹೌಸ್ ಆವರಣದಲ್ಲಿಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕರಾದ ಜಗದೀಶ್ ಶೆಟ್ಟರ್ ವಿಕಲಚೇನತರಿಗೆ ಸರ್ಕಾರದಿಂದ ನೀಡಲಾದ ತ್ರಿಚಕ್ರ ಮೋಟಾರು ಸೈಕಲ್ ವಾಹನಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಕಲಚೇತನರು ಪ್ರತಿನಿತ್ಯ ಓಡಾಟ ನೆಡಸಲು ಕಷ್ಟಪಡುವುದನ್ನು ನಾವೆಲ್ಲ ನೋಡಿದ್ದೇವೆ. ಸರ್ಕಾರದಿಂದ ನೀಡಿರುವ ತ್ರಿಚಕ್ರ ವಾಹನ ವಿಕಲಚೇನರಿಗೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸಹಾಯಕಾರಿಯಾಗಿದೆ‌ ಎಂದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು 2008-09 ರಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ಹಾಗೂ ನಿಯಮಗಳ ಅನುಸಾರ, ಯಾವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸ ಬೇಕು ಎಂಬುದನ್ನು ಅವಲೋಕಿಸಿ ಕ್ರಮ ಕೈಗೊಳ್ಳಬೇಕಿದೆ. ಇದು ಬಹಳ ಸೂಕ್ಷ್ಮವಾದ ವಿಚಾರವಾಗಿದೆ. ನೂರಾರು ವರ್ಷಗಳ ಹಳೆಯದಾದ ದೇವಸ್ಥಾನ ಅಥವಾ ಇತರೆ ಧಾರ್ಮಿಕ ಸ್ಥಳ ತೆರವುಗೊಳಿಸುವ ವೇಳೆಯಲ್ಲಿ ಭಕ್ತ ಅಭಿಪ್ರಾಯ ಸಂಗ್ರಹಿಸುವುದು ಮುಖ್ಯವಾಗಿದೆ. ಒಂದು ವೇಳೆ ಸ್ಥಳಾಂತರಕ್ಕೆ ಅವಕಾಶವಿದ್ದರೆ ಅದನ್ನು ಪರಿಗಣಿಸಬೇಕು. ತರಾತುರಿಯಲ್ಲಿ ದೇವಸ್ಥಾನ ತೆರವು ಸಲ್ಲದು ಎಂದರು.

ಬಿ.ಆರ್.ಟಿ.ಎಸ್ ವೇಳೆಯಲ್ಲಿ ಭೂಸ್ವಾಧೀನ ಪಡೆದು ಪರಿಹಾರವನ್ನು ನೀಡಲಾಗಿದೆ. ಆದಾಗ್ಯೂ ಕೆಲವು ಕಟ್ಟಡಗಳ ತೆರವು ಕೈಗೊಂಡಿಲ್ಲ. ಈ ಕುರಿತು ಹಲವು ಸಭೆಗಳಲ್ಲಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.

ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಪಸ್ವರ ತೆಗೆದಿದೆ. ಕೇಂದ್ರ ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಯೋಜನೆ ಅನುಷ್ಠಾನಕ್ಕೆ ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿಗಾಗಿ ನಿರೀಕ್ಷಿಸಲಾಗಿದೆ. ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಯಡಿಯ್ಯೂರಪ್ಪನವರು ಮುಖ್ಯಮಂತ್ರಿಗಳು ಇದ್ದ ವೇಳೆ 500 ಕೋಟಿ ರೂಪಾಯಿಗಳನ್ನು ಮೀಸಲಿರಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ಮಲ್ಲಿಕಾರ್ಜುನ ಗುಡೂರು,
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಡಿ.ಎನ್. ಮೂಲಿಮನಿ, ಮುಖಂಡರಾದ ಮಲ್ಲಿಕಾರ್ಜುನ ಸವಕಾರ, ಸಿದ್ದು ಮೂಗಲಿ ಶೆಟ್ಟರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

*ತ್ರಿಚಕ್ರ ವಾಹನ ಪಡೆದ ಪಲಾನುಭವಿಗಳ ವಿವರ*

ಭೈರಿಕೊಪ್ಪದ ಗೌಡರ ಓಣಿಯ ನಿವಾಸಿ ಮರತಂಗೆವ್ವ ಗಂಗಪ್ಪ ಮಾಯಕರ, ಅಂಚಿಯರ ಓಣಿ ನಿವಾಸಿ ಸಿದ್ದಪ್ಪ.ಬ. ಜಿನ್ನೂರ, ಕೌಲ್ ಪೇಠ್ ಬ್ಯಾಳಿ ಓಣಿಯ ನಿವಾಸಿ ವಿರುಪಾಕ್ಷ ನಾಗಪ್ಪ ಮುನವಳ್ಳಿ, ವಿದ್ಯಾನಗರದ ಲೋಕಪ್ಪನ ಹಕ್ಕಲದ ನಿವಾಸಿ ದೀಪಕ. ಗಜಾನನ. ರಾಜೋಳ್ಳಿ, ಗೋಕುಲ ರಸ್ತೆಯ ಪ್ರಿಯದರ್ಶಿನಿ ಕಾಲೋನಿಯ ನಿವಾಸಿ ಸಂಗೀತ .ಈರಣ್ಣ. ಶಿಶ್ವಿನಹಳ್ಳಿ, ಕೇಶ್ವಾಪುರದ ನಿವಾಸಿ ಸಭಾಕೌಸರ್. ರಾಜೀಸಾಬ್. ಹಿತ್ತಲಮನಿ, ಗಾಂಧಿವಾಡದ ನಿವಾಸಿ ವಿ.ಮ್ಯಾಥ್ಯು ಬಿನ್ ಇಸ್ರಾಯಿಲ್, ರೇಣುಕಾ ನಗರದ ನಿವಾಸಿ ಮಂಜುನಾಥ್ ನಿಂಗಪ್ಪ ಗುಡ್ಡಪ್ಪನವರ, ಅಜಾದ ಕಾಲೋನಿಯ ನಿವಾಸಿ ಆನಂದ ಬಾಬುರಾವ ಅವಟೆ ಮತ್ತು ಬಾಪುಜಿನಗರದ ನಿವಾಸಿ ಗುರುನಾಥ್ ತಿಮ್ಮಣ್ಣ ಗದಗ.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]