ಚಕ್ಕಡಿ ಬೈಕ್ ನಡುವೆ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲಿಯೇ ಸಾವು
ತಡ ಸಂಜೆ ವೇಳೆ ಮನೆಯ ಕಡೆಗೆ ತೆರಳುತ್ತಿದ್ದ ಚಕ್ಕಡಿವೊಂದಕ್ಕೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಧಾರವಾಡ ರಾಷ್ಟ್ರೀಯ ಹೆದ್ದಾರಿಯ ನರೇಂದ್ರ ಕ್ರಾಸ ಬಳಿಯ ಸಾಯಿ ಅರಣ್ಯ ಹೋಟೆಲ್ ಬಳಿ ನಡೆದಿದೆ.
ಮೃತ ಯುವಕನನ್ನ ಹುಬ್ಬಳ್ಳಿಯ ಕೇಶ್ವಾಪೂರದ ಸುಂಕದ ಚಾಳ ನಿವಾಸಿ ಸಂತೋಷ ಮಾರುತಿ ತಹಶೀಲ್ದಾರ ಎಂದು ಗುರುತಿಸಲಾಗಿದೆ. ಇನ್ನೂ ಬೈಕ್ ಸವಾರ ಅತಿ ವೇಗವೆ ದುರ್ಘಟನೆಗೆ ಕಾರಣವೆಂದು ಹೇಳಲಾಗುತ್ತಿದೆ. ಚಕ್ಕಡಿಗೆ ಬೈಕ್ ಡಿಕ್ಕಿ ಹೋಡೆದ ರಭಸಕ್ಕೆ ಚಕ್ಕಡಿ ಎರಡು ಭಾಗವಾಗಿ ಕಟ್ಟಾಗಿದೆ. ಎರಡು ಎತ್ತುಗಳಿಗೂ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಕುರಿತು ಸ್ಥಳಿಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಯುವಕನ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.