ಶಿಕ್ಷಕರ ಹಾಗೂ ನಮ್ಮ ನಡುವಿನ ಸಂಬಂಧ ಕುಟುಂಬದ ಸಂಬಂಧವಾಗಿ ಬೆಳೆದು ನಿಂತಿದೆ. ಕಳೆದ ನಲವತ್ತು ವರ್ಷಗಳಿಂದ ಅವರ ನಮ್ಮ ನಡುವೆ ಒಂದು ಬಾಂಧವ್ಯ ಹೆಚ್ಚುತಲ್ಲೇ ಬಂದಿದೆ. ಶಿಕ್ಷಕರ ಮೇಲೆ ನಾನು ಪ್ರೀತಿ ವಿಶ್ವಾ ಇಟ್ಟುಕೊಂಡು ಬಂದಿದ್ದೇನೆ ಅವರು ಕೂಡಾ ನನ್ನ ಮೇಲೆ ಅಷ್ಟೇ ಪ್ರೀತಿ ವಿಶ್ವಾ ತೋರಿಸುತ್ತಾಲ್ಲೇ ಬರುತ್ತಿದೆ ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರು ಹೇಳಿದರು.
ಧಾರವಾಡದ ಶಹರ ಮತ್ತು ಗ್ರಾಮೀಣ ಶಾಲಾ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ಸಂಘದಿಂದ ಅಭಿನಂದನಾ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು, ಶಿಕ್ಷಕರ ಅಭಿಮಾನಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಶಿಕ್ಷಕರ ಈ ಅಭಿಮಾನ ಮುಂದೆ ಯಾವ ಖುಷಿಯು ಸರಿಹೋಗುವುದಿಲ್ಲ ಎನ್ನುವ ಮೂಲಕ ಶಿಕ್ಷಕರು ಹಾಗೂ ತಮ್ಮ ನಡುವಿನ ಆತ್ಮೀಯ ಸಂಬಂಧದ ಕುರಿತು ವಿವರಿಸಿದರು.