ಹುಬ್ಬಳ್ಳಿ: ಮಹಾನಗರ ಪಾಲಿಕೆಯ 60 ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಕೌಸರಬಾನು ಬಶೀರ ಅಹ್ಮದ್ ಗುಡಮಾಲ್ ವಾರ್ಡ ವ್ಯಾಪ್ತಿಯ ಚನ್ನಪೇಟೆ, ಹನಗಿ ಓಣಿ, ಅವರಾದ ಓಣಿ, ನಾರಾಯಣ ಸೋಪಾ, ಮಹಮ್ಮದ್ ನಗರ, ಮ್ಯಾದಾರ ಓಣಿ, ಜನತಾ ಕ್ವಾರ್ಟರ್ಸ್ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಇಂದು ಓಣಿಯ ಹಿರಿಯರು, ತಾಯಂದಿರು, ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರೊಂದಿಗೆ ಪ್ರಚಾರ ನಡೆಸಿ ಬಡವರ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ, ವಾರ್ಡಿನ ನಿವಾಸಿಯಾದ ತಮಗೆ ಇಲ್ಲಿನ ವಾಸ್ತವದ ಅರಿವಿದ್ದು, ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಗುರುತಿಗೆ ಮತ ಹಾಕುವ ಮೂಲಕ ವಾರ್ಡಿನ ಅಭಿವೃದ್ಧಿಗೆ ಸಹಕರಿಸಲು ವಿನಂತಿಸಿದರು.
ಈ ಹಿಂದೆ ನನ್ನ ಪತಿ ಬಶೀರ ಅಹ್ಮದ್ ಗುಡಮಾಲ್ ಅವರು ಪಾಲಿಕೆ ಸದಸ್ಯರಾಗಿ ವಾರ್ಡ್ ನಲ್ಲಿ ಮಾಡಿರುವ ಅಭಿವೃದ್ಧಿಯ ಕೆಲಸಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಈ ವಾರ್ಡ್ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಭೀತು ಪಡಿಸುವುದಾಗಿ ಹೇಳಿದರು.
ಪ್ರಚಾರ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಬಶೀರ ಅಹ್ಮದ್ ಗುಡಮಾಲ್, ಮುಖಂಡರಾದ ಟಾಹಿರ್ ಕೋಜಿ, ಮಹಮ್ಮದ್ ಸಾಧಿಕ್ ಮೇಸ್ತ್ರಿ, ಮಹಮ್ಮದ್ ರಫೀಕ್ ಗದವಾಲ್, ಮಹಮ್ಮದ್ ಹನೀಫ್ ಸಗರಿ, ಅಲ್ಲಾಭಕ್ಷ ಮಲ್ಲೂರು, ನೂರ ಅಹ್ಮದ್ ಸಂಗ್ರೇಶಕೊಪ್ಪ, ಹುಸೇನಸಾಬ ಶಾಕೂರಿ, ಪಟೇಲ್ ಮಣಿಯಾರ್, ಅನಿಶ್ ಜಮಾದಾರ್, ಯಾಸಿನ್ ಗುಡಮಾಲ್, ಇಮ್ತಿಯಾಜ್ ಮುಲ್ಲಾ ಸೇರಿದಂತೆ ಮುಂತಾದವರು ಇದ್ದರು.