ಹುಬ್ಬಳ್ಳಿ : ಬಿಜೆಪಿ ಕೇಂದ್ರ ನಾಯಕರು ಕೈಗೊಂಡಿರುವ ಜನಾರ್ಶೀವಾದ ಯಾತ್ರೆಯಲ್ಲಿ ಯಾವುದೇ ಸಂದೇಶವಿಲ್ಲ. ಅವರ ಯಾತ್ರೆಯು ಕೇವಲ ಹಾರ ತುರಾಯಿ, ನಾಡ ಬಂದೂಕಿನ ಗುಂಡು ಹಾರಿಸುವುದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಹಲವು ಕಡೆಗಳಲ್ಲಿ ಕೇಂದ್ರ ಬಿಜೆಪಿಯವರು ನಡೆಸುತ್ತಿರುವ ಜನಾರ್ಶೀವಾದದಲ್ಲಿ ಗುಂಡು ಹಾರಿಸಿ ಸ್ಥಳಿಯ ನಾಯಕರು ಸ್ವಾಗತ ಮಾಡಿದ್ದಾರೆ. ಇದರ ಕುರಿತು ಜನಾರ್ಶೀವಾದ ಮಾಡಲು ಬಂದ ನಾಯಕರೇ ತಪ್ಪಾಗಿದೆ ಎಂದಿದ್ದಾರೆ. ಇದರ ಮೇಲೆಯೇ ಅರ್ಥವಾಗುತ್ತದೆ ಯಾತ್ರೆಯಲ್ಲಿ ಯಾವ ರೀತಿಯ ಸಂದೇಶವಿದೆ ವ್ಯಂಗ್ಯವಾಡಿದರು.
*ಬಹಳ ನಂತರ ಪ್ರವಾಸ.*
ಬಹಳ ತಿಂಗಳ ಬಳಿಕ ಹುಬ್ಬಳ್ಳಿಗೆ ಬಂದಿದ್ದೇನೆ. ಕಳೆದ ಹಲವು ದಿನಗಳಿಂದ ನಾನು ರಾಜ್ಯ ಪ್ರವಾಸ ಮಾಡಿಲ್ಲ. ಕಳೆದ ಒಂದು ವರ್ಷದಲ್ಲಿ ನನ್ನ ರಾಜಕೀಯ ಚಟುವಟಿಕೆ ನಿರಂತರ ನಡೆಯುತ್ತಿದೆ.
ನಾನು ಯಾವ ಕಾರಣಕ್ಕೆ ಪ್ರವಾಸ ಮಾಡಿಲ್ಲ ಅನ್ನೋದು ನಿಮಗೂ ಗೊತ್ತಿದೆ. ಕೋವಿಡ್ ನಿಂದಾಗಿ ಹಲವಾರು ಜನ ಮೃತಪಟ್ಟಿದ್ದಾರೆ.
ನಾವೇ ನಿಯಮಗಳನ್ನು ಮಾಡಿದ್ರು ಅವುಗಳನ್ನು ನಾವೇ ಬ್ರೇಕ್ ಮಾಡಿದ್ದೇವೆ. ಕೋವಿಡ್ ನಿರ್ವಹಣೆಯಲ್ಲಿ ಎಷ್ಟು ಕೆಲ್ಸ ಮಾಡಿದ್ದೇವೆ ಅನ್ನೋದನ್ನ ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಹೇಳಿದರು.
*ಪಾಲಿಕೆ ಚುನಾವಣೆಗೆ ಆಕ್ಷೇಪ.*
ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಆಗಿದೆ. ಈಗಾಗಲೇ ಹು-ಧಾ ಮಾಹಾನ್ರ ಪಾಲಿಕೆಯ ಕುರಿತು ಅಭ್ಯರ್ಥಿಗಳನ್ನು ಪಕ್ಷದಿಂದ ಕಣಕ್ಕೆ ಇಳಿಸಲಾಗುತ್ತಿದೆ. ಜಿಲ್ಲೆಯ ಜೆಡಿಎಸ್ ನಾಯಕರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. 82 ವಾರ್ಡಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು. ಬೆಳಗಾವಿ ಪಾಲಿಕೆಯಲ್ಲಿ ಕೊಂಚ ಹಿನ್ನಡೆಯಾಗುತ್ತಿದೆ. ಆದರೆ ಪಾಲಿಕೆಯ ಚುನಾವಣೆಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಮಾಡುತ್ತಿದ್ದಾರೆ. ಮಕ್ಕಳ ಮೇಲೆ ಕೋವಿಡ್ 3 ನೆಯ ಅಲೆಯನ್ನ ನಾವೇ ದಾರಿ ಮಾಡಿಕೊಡುತ್ತಿದ್ದೇವೆ ಎನ್ನುವ ಮೂಲಕ ಆಕ್ಷೇಪ ವ್ಯಕ್ತಪಡಿಸಿದರು.
*ಹೊರಟ್ಟಿ ಸ್ಥಾನವನ್ನು ಕೊನರೆಡ್ಡಿ ತುಂಬಿದ್ದಾರೆ.*
ಹೊರಟ್ಟಿ ಇದ್ರು ಅವರು ಈಗ ಸಭಾಪತಿ ಆಗಿದ್ದಾರೆ.
ಆದ್ರೆ ಈಗ ಕೋನರೆಡ್ಡಿಯವರೆ ಅವರ ಸ್ಥಾನ ತುಂಬಿದ್ದಾರೆ. ಉತ್ತಮವಾದ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದಾರೆ. ಬೆಳಗಾವಿಯ ನಗರದಲ್ಲಿ ನಮಗೆ ಹಿನ್ನಡೆ ಇದೆ. 55 ರಲ್ಲಿ 22 ಸ್ಥಾನಗಳನ್ನ ನೇಮಿಸಲಾಗಿದೆ. 55 ಜನರ ಪಟ್ಟಿ ಬಿಡುಗಡೆಯಾಗಿದೆ. ಮೊದಲಿಂದಲೂ ನಮಗೆ ಅಷ್ಟೊಂದು ದೊಡ್ಡ ಶಕ್ತಿ ಈ ಭಾಗದಲ್ಲಿ ಇಲ್ಲ.
ನಾನು ಸಿಎಂ ಇದ್ದಾಗ ಶಿರಹಟ್ಟಿ ಭಾಗದಲ್ಲಿ ಹಲವಾರು ಕಾರ್ಯಕ್ಕೆ ಚಾಲನೆ ಕೊಟ್ಟಿದ್ದೆ.
ಬಜೆಟ್ ನಲ್ಲಿ 10 ಕೋಟಿ ಮಿಸಲಿಟ್ಟಿದ್ದೆ.ರೈತರಿಗೆ ಸಾಲಮನ್ನ ಮಾಡಿದ್ದೆ ಅನ್ನೋದಕ್ಕೆ ಮತ್ರ ಸೀಮಿತವಾಗಿಲ್ಲ. ನಾನು ಯಾವುದೇ ಭೇದ ಭಾವ ಇಲ್ಲದೆ ಕೆಲಸ ಮಾಡಿದ್ದೇನೆ ಎಂದರು.
*ಕಾಂಗ್ರೆಸ್ ಬಿಜೆಪಿ ವಿರುದ್ದ ಗುಡುಗಿದ ಕುಮಾರಸ್ವಾಮಿ.*
2014 ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಡುಗೆ ಕೃಷ್ಣೆ ಕಡೆಗೆ ಅಂತ ಪಾದಯಾತ್ರೆ ಮಾಡಿದರು.
ಆದರೆ ಅದು ಕಾಂಗ್ರೆಸ್ ನಡೆ ಆಂಧ್ರ ಕಡೆ ಅಂತ ನಾನು ಆಗಲೇ ಪ್ರಶ್ನೆ ಮಾಡಿದ್ದೆ. ಕಾವೇರಿಯ ಟೀಬಿನಲ್ ಹಂಚಿಕೆ ಇದ್ದಾಗಲೇ. ಗೆಜೆಟ್ ನೋಟಿಫಿಕೇಶನ್‌ನನ್ನು ಇದೆ ಮೋದಿ ಮಾಡಿದ್ರು. ಆದೇ ಮಹದಾಯಿ ವಿಚಾರದಲ್ಲಿ ಪ್ರಧಾನಿಗಳ ಆ ಆತುರ ಕಾಣಲಿಲ್ಲ. ಮಹದಾಯಿ ತೀರ್ಪು ತಡೆಹಿಡಿದ್ದು ಕೇಂದ್ರ ಸರ್ಕಾರ ದ್ರೋಹ ಮಾಡಿದೆ. 25 ವರ್ಷಗಳ ಹಿಂದೆ ದೇವೇಗೌಡರು ಪ್ರಧಾನಿ ಇದ್ದಾಗ 200 ಕೋಟಿ ನೀರಾವರಿ ಯೋಜನೆಗೆ ನೀಡಿದ್ರು. ಆಗ ಚಂದ್ರಬಾಬು ನಾಯ್ಡು ಪತ್ರದ ಮೂಲಕ ಬೆಂಬಲ ಹಿಂಪಡೆಯುತ್ತೇವೆ ಅಂತ ಬೆದರಿಸಿದ್ರು. ಆಗ ನಾನೇನು ನಿಮ್ಮನ್ನ ಬೆಂಬಲ ನೀಡಿ ಅಂತ ಕೇಳಿಲ್ಲ ಅಂತ ದೇವೇಗೌಡರು ಹೇಳಿದ್ರು. ಕೇಂದ್ರ ಸರ್ಕಾರ ಉತ್ತರ ಕರ್ನಾಟಕಕ್ಕೆ ಮಾಡಿದನ್ನ ನೀವೇ ನೆನೆಸಿಕೊಳ್ಳಬೇಕು. ಮಹದಾಯಿ ಸೇರಿದಂತೆ ಪ್ರವಾಹಕ್ಕೂ ಹೆಚ್ಚಿನ ಆನುಕೂಲ ಮಾಡಿಲ್ಲ ವಾಗ್ದಾಳಿ ನಡೆಸಿದರು.
*ಇದ್ಗಾ ಮೈದಾನ ಸಮಸ್ಯೆ ಬಗೆಹರಿಸಿದ್ದು ಜೆಡಿಎಸ್.*
ಇದ್ಗಾ ಮೈದಾನದ ಸಮಸ್ಯೆ ಇಡೀ ಅವಳಿನಗರ ಶಾಂತಿಯನ್ನು ಹಾಳು ಮಾಡಿತ್ತು. ಅಲ್ಲದೆ ಅನೇಕ ಸಾವು ನೋವುಗಳ ಕೂಡಾ ಈ ಘಟನೆಯಲ್ಲಿ ಸಂಭವಿಸಿದವು. ಅಂತಹ ದೊಡ್ಡ ಸಮಸ್ಯೆಯನ್ನ ಬಗೆಹರಿಸಿದ್ದೆ ಜೆಡಿಎಸ್ ಪಕ್ಷವಾಗಿದೆ. ಸಿಎಂ ಆದ ಮೇಲೆ ನಾನು ನೀಡಿದ ಅನುದಾನವನ್ನ ಈಗ ಕಡಿತ ಮಾಡಿದ್ದಾರೆ, ಆ ರೀತಿ ನಾನು ಯಾವತ್ತು ಮಾಡಿಲ್ಲ.
ಮಹದಾಯಿಗೆ ನಾನು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗ್ತಿವಿ. 14 ತಿಂಗಳಲ್ಲಿ 24 ಸಾವಿರ ಕೋಟಿ ಹೊಂದಿಸಿ ಕೊಟ್ಟಿದ್ದೇವೆ. ಸಾಲಮನ್ನ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಬಂದಿದೆ. ಘೋಷಣೆಗೆ ಮಾತ್ರ ಸೀಮಿತವಾಗಲ್ಲ ನಾವು. ಕಾಂಗ್ರೆಸ್ ನಾಯಕ ಒತ್ತಡದ ನಡುವೆಯೇ ನಾನು ಏನೇನು ನೀಡಿದ್ದೇನೆ ಅವರನ್ನೇ ಕೇಳಿ. ನಂಬಿಕೆ ವಿಶ್ವಾಸದ ಮೇಲೆ ಸರ್ಕಾರ ಆಗುತ್ತೆ ಎಂದರು.
*ಸಿದ್ದರಾಮಯ್ಯ ಈ ಪಕ್ಷವನ್ನ ಮುಗಿಸಬೇಕು ಅಂತ ತೀರ್ಮಾನ ಮಾಡಿದ್ದಾರೆ.*
ನಿಖಿಲ್ ಮತ್ತು ಪ್ರಜ್ವಲ್ ಇನ್ನು ಟ್ರೈನ್ ಅಪ್ ಆಗಬೇಕಿದೆ. ಟ್ರೈನಿಂಗ್ ಇಲ್ಲದಿದ್ರು ಅನುಭವ ಮುಖ್ಯ. ಸಿದ್ದರಾಮಯ್ಯ ನವರು ನಾನು ಜನತಾ ಪರಿವಾರದವರು ಅಂತ ಹೇಳಲಿಲ್ಲ. ಆದ್ರೆ ಸಿಎಂ ಬಸವರಾಜ ಬೊಮ್ಮಾಯಿಗೆ ಅದರ ಬಗ್ಗೆ ಹಳೆಯ ಅರಿವಿದೆ. ಸಿದ್ದರಾಮಯ್ಯ ಈ ಪಕ್ಷವನ್ನ ಮುಗಿಸಬೇಕು ಅಂತ ತೀರ್ಮಾನ ಮಾಡಿದ್ದಾರೆ.
ಇನ್ನು ಮುಂದೆ ಹೊಸ ಮುಖಗಳಿಗೆ ಆದ್ಯತೆ ನೀಡುತ್ತೇನೆ. ಯಾರು ನಮಗೆ ಶಾಕ್ ಕೊಡೋಕೆ ಆಗಲ್ಲ. ಜಿ.ಟಿ ದೇವೇಗೌಡರದು ಅದೂ ಹಳೆ ಕಥೆ. ಸುಮಲತಾ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು ದೊಡ್ಡವರು ಇದ್ದಾರೆ. ನೀವೇ ಅವರನ್ನು ಮೇಲೆತ್ತಿ ಕುರಿಸಿದ್ದೀರಿ ಎನ್ನುವ ಮೂಲಕ ಮಾಧ್ಯಮದವರೇ ಕಡೆಗೆ ಬೊಟ್ಟು ಮಾಡಿದರು.