ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಆಮ್ ಆದ್ಮಿ ಪಕ್ಷವು ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಪಕ್ಷದ ರಾಜ್ಯ ಮುಖಂಡರಾದ ಎಂ. ರವಿಶಂಕರ್ ಪಕ್ಷದ ಪ್ರಣಾಳಿಕೆಯನ್ನು ಅನಾವರಣಗೊಳಿಸಿದ್ದು, ದೆಹಲಿ ಮಾದರಿಯಲ್ಲಿ ಹು-ಧಾದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಸ್ವಚ್ಛ ಆಡಳಿತ ನೀಡುವ ಭರವಸೆ ನೀಡಿದ್ದಾರೆ.
ಪ್ರಾಣಾಳಿಕೆಯಲ್ಲಿ 25 ಖಾತ್ರಿಗಳನ್ನು ತಿಳಿಸಿದ್ದು, ಅವುಗಳು ಭ್ರಷ್ಟಾಚಾರ ರಹಿತ ಮಹಾನಗರ ಪಾಲಿಕೆ ಮತ್ತು ಕುಂದುಕೊರತೆಗಳ ನಿವಾರಣೆಗೆ 24/7 ಸಹಾಯವಾಣಿ, ಉಚಿತ ಶಿಕ್ಷಣದೊಂದಿಗೆ 100 ವಿಶ್ವದರ್ಜೆಯ ಸರಕಾರಿ ಶಾಲೆಗಳು ( ಪ್ರತಿ ವಾರ್ಡ್‌ಗೆ ಕನಿಷ್ಠ ಒಂದು ), ಎಲ್ಲಾ ಶಾಲೆಗೆ ಹೋಗುವ ಮಕ್ಕಳಿಗೆ ಉಚಿತ ಲ್ಯಾಪಟಾಪ್, ಉಚಿತ ಚಿಕಿತ್ಸೆಯೊಂದಿಗೆ 100 ವಿಶ್ವದರ್ಜೆಯ ಸರಕಾರಿ ಕ್ಲಿನಿಕ್‌ಗಳು ( ಪ್ರತಿ ವಾರ್ಡ್‌ಗೆ ಕನಿಷ್ಠ ಒಂದು ), ಹಿರಿಯ ನಾಗರಿಗೆ ( 60 ವಯಸ್ಸು ಮೆಲ್ಪಟ್ಟವರಿಗೆ ) ರೂ . 1,00,000 ದ ಆರೋಗ್ಯ ವಿಮೆ, ಪ್ರತಿ ಮನೆಗೆ , ಪ್ರತಿ ತಿಂಗಳು 20,000 ಸಾವಿರ ಲೀಟರ್ ನೀರು ಸರಬರಾಜು, ಗುಂಡಿ ರಹಿತ , ಧೂಳು ರಹಿತ ರಸ್ತೆಗಳು, ಕಾಲಮಿತಿಯೊಳಗೆ ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳು ( ಕಟ್ಟಡದ ಪರವಾನಗಿ , ವ್ಯಾಪಾರ ಪರಾನಗಿ , ಜನನ / ಮರಣ ಪ್ರಮಾಣ ಪತ್ರ ಇತ್ಯಾದಿ ), 100 ಸುಂದರ ಉದ್ಯಾನಗಳು ( ಪ್ರತಿ ವಾರ್ಡ್‌ಗೆ ಕನಿಷ್ಠ ಒಂದು ) 5 ವಿಶ್ವದರ್ಜೆಯ ಕೆರೆ ಉದ್ಯಾನಗಳ ಅಭಿವೃದ್ಧಿ, 12 ವಿಶ್ವದರ್ಜೆಯ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಕೀರ್ಣ ( ಪ್ರತಿ ವಲಯಕ್ಕೆ ಒಂದು ), ಅವಳಿ ನಗರಕ್ಕೆ ಹಸಿರು ಹೊದಿಕೆ , 1,00,000 ಮರಗಳ ಬೆಳೆಸುವುದು, 10,000 ಸಿಸಿಟಿವಿ ಕ್ಯಾಮೆರಾಗಳು ( ಪ್ರತಿ ವಾರ್ಡ್‌ಗೆ ಕನಿಷ್ಠ 100 ), ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಮತ್ತು ಜನರ ಸಮಸ್ಯೆಗಳನ್ನು ಕೇಳಿ , ಪರಿಹರಿಸಲು ವಾರ್ಡ ಸಮೀತಿಗಳ ರಚನೆ, ಹುಬ್ಬಳ್ಳಿ – ಧಾರವಾಡದಲ್ಲಿ ಐಟಿ – ಬಿಟಿ , ಕೃಷಿ ಸಂಬಂಧಿತ 1,00,000 ಉದ್ಯೋಗಾವಕಾಶ ಸೃಷ್ಟಿ, 500 ನವೋದ್ಯಮಿಗಳಿಗೆ ಇನ್ನೊಬೆಷನ್ ಸೌಲಭ್ಯ, ಎಲ್ಲ ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜು , ಉತ್ತಮ ರಸ್ತೆಗಳು ಮತ್ತು ಕಸದ ವಿಲೆವಾರಿಯ ವ್ಯವಸ್ಥೆ, 100 ವಿಶ್ವದರ್ಜೆಯ ವಾರ್ಡ್ ಸಂತೆಗಳು ( ಪ್ರತಿ ವಾರ್ಡ್‌ಗೆ ಕನಿಷ್ಠ ಒಂದು ), 100 ಆಟೋ ರಿಕ್ಷಾ ನಿಲ್ದಾಣಗಳು ( ಪ್ರತಿ ವಾರ್ಡ್‌ಗೆ ಕನಿಷ್ಠ ಒಂದು ), ಅವಳಿ ನಗರದಾದ್ಯಂತ ನಾಗರಿಕ ಸ್ನೇಹಿ ಪಾರ್ಕಿಂಗ್ ವ್ಯವಸ್ಥೆ, ಸ್ವಚ್ಛ ಮಹಾನಗರ ಮತ್ತು ಕಸ ಮುಕ್ತ ವಾರ್ಡ್‌ಗಳು ಮತ್ತು ರಸ್ತೆಗಳು, 100 ಉತ್ತಮ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ / ನವಿಕರಣ ( ಪ್ರತಿ ವಾರ್ಡ್‌ಗೆ ಕನಿಷ್ಠ ಒಂದು ), ತಡೆರಹಿತ ವಳಚರಂಡಿ ಮತ್ತು ಮಳೆ ನೀರಿನ ಗಟಾರುಗಳು, ಜನರ ಮೇಲೆ ಆಸ್ತಿ ತೆರಿಗೆಯ ಹೊರೆ ಕಡಿಮೆ ಮಾಡುವ ಗುರಿ, ಆಶ್ರಯ ಕಾಲೋನಿ ಮತ್ತು ಅಕ್ರಮ – ಸಕ್ರಮ ಬಡಾವಣೆಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿದಲಾಗುವುದು ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಹ ಸಂಚಾಲಕರು ಹಾಗೂ ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಉಸ್ತುವಾರಿ ಶಾಂತಲಾ ದಾಮ್ಲೆ, ರಾಜ್ಯ ಸಂಚಾಲಕರಾದ ಎಂ. ರವಿಶಂಕರ, ಜಿಲ್ಲಾಧ್ಯಕ್ಷ ಸಂತೋಷ ನರಗುಂದ, ರಾಜ್ಯ ಸಮಿತಿಯ ಸದಸ್ಯರಾದ ಪ್ರಕಾಶ ನಿಡಗುಂದಿ, ಬಸವರಾಜ ಮುದ್ದಿಗೌಡರ ಸೇರಿದಂತೆ ಪಕ್ಷದ ಆಕಾಂಕ್ಷಿಗಳು, ಕಾರ್ಯಕರ್ತರು ಉಪಸ್ಥಿತಿದ್ದರು.
*ಮೂರನೇ ಪಟ್ಟಿ ಬಿಡುಗಡೆ*
ಆಮ್ ಆದ್ಮಿ ಪಕ್ಷದ ಮೂರನೇ ಪಟ್ಟಿ ಬಿಡುಗಡೆ ಮಾಡಲಾಯಿತು. ವಾರ್ಡ್ ನಂಬರ್ 4 ರಿಂದ ಮಲ್ಲಿಕಾರ್ಜುನ ಶಲ್ವಡಿ, ವಾರ್ಡ್ ನಂಬರ್ 5 ರಿಂದ ಮಲ್ಲಿಕಾರ್ಜುನ ಶೇಖ, ವಾರ್ಡ್ ನಂಬರ್ 15 ರಿಂದ ನಟರಾಜ ಶಂಕರ ನಾಶಿ, ವಾರ್ಡ್ ನಂಬರ್ 18 ರಿಂದ ಚಂದ್ರಶೇಖರ ಆನೆಮಠ, ವಾರ್ಡ್ ನಂಬರ್ 30 ರಿಂದ ಮಮತಾ ಅಕ್ಕಸಾಲಿ, ವಾರ್ಡ್ ನಂಬರ್ 31 ರಿಂದ ಭೀಮಸಿಂಗ್ ಜಾಧವ್, ವಾರ್ಡ್ ನಂಬರ್ 32 ರಿಂದ ಕುಮಾರ ನೂಲ್ವಿ, ವಾರ್ಡ್ ನಂಬರ್ 39 ರಿಂದ ರೋಹಿಣಿ ಸೋಮನಕಟ್ಟಿ, ವಾರ್ಡ್ ನಂಬರ್ 42 ರಿಂದ ಧನರಾಜ ಚಂದಾವರಿ, ವಾರ್ಡ್ ನಂಬರ್ 43 ರಿಂದ ಮನೋಜ ಕಾಮಕರ, ವಾರ್ಡ್ ನಂಬರ್ 45 ರಿಂದ ಜೇ.ಸುಧೀರ ಕುಮಾರ, ವಾರ್ಡ್ ನಂಬರ್ 49 ರಿಂದ ನೇಹಾ ಇರಕಲ್, ವಾರ್ಡ್ ನಂಬರ್ 50 ರಿಂದ ಸವಿತಾ ಸಾವಂತವಾಡಿ, ವಾರ್ಡ್ ನಂಬರ್ 58 ರಿಂದ ಶಿಲ್ಪಾ ಆರ್.ಮಾದಾಪುರ, ವಾರ್ಡ್ ನಂಬರ್ 59 ರಿಂದ ಸ್ವರ್ಣಕುಮಾರಿ ಲುಂಜಲಾ, ವಾರ್ಡ್ ನಂಬರ್ 60 ರಿಂದ ಲಕ್ಷ್ಮಿ ಹಳಪೇಟಿ, ವಾರ್ಡ್ ನಂಬರ್ 74 ರಿಂದ ಹೇಮಾ ಧರ್ಮರಾಜ ಸಾಥಪತಿ, ವಾರ್ಡ ನಂಬರ್ 78 ರಿಂದ ಸೌಮ್ಯ ವಿಠ್ಠಲ ಪವಾರ್ ಸ್ಪರ್ಧೆ ಮಾಡಲಿದ್ದಾರೆ.