ಹುಬ್ಬಳ್ಳಿ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಇಂದು ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.
ಮಹಾನಗರ ಪಾಲಿಕೆಯ ಮತ್ತೆ 15 ವಾರ್ಡ್‌ಗಳಿಗೆ ಬಿಜೆಪಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಅಧಿಕೃತಗೊಳಿಸಿದ್ದು, ಆ ಪಟ್ಟಿಯನ್ನು ವಿಧಾನಸಭಾ ವಾರು ಬಿಡುಗಡೆ ಮಾಡಿದೆ.
ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾರ್ಡ್ ನಂಬರ್ 61 ರಿಂದ ಅನುಪಕುಮಾರ ಶಂಕ್ರಪ್ಪ ಬಿಜವಾಡ, 63 ವಾರ್ಡ್ ನಿಂದ ಮಲ್ಲಪ್ಪ ಶಿರಕೋಳ, 64 ನೇ ವಾರ್ಡ್ ನಿಂದ ರುಕ್ಮಿಣಿ ಸತೀಶ ಶೇಜವಾಡಕರ, 69 ನೇ ವಾರ್ಡ ನಿಂದ ಅನುಷಾ ಜಶ್ವಂತ ಜಾಧವ, 77 ವಾರ್ಡ್ ನಿಂದ ಸ್ವಾಲೆಹಾಬೇಗಂ ಮಹ್ಮದ್ ಝುಕ್ರಿಯಾ ಹೊಸೂರು, 81 ನೇ ವಾರ್ಡ್ ಗೆ ಸಾರೀಕಾ ಮಂಜುನಾಥ ಬಿಜವಾಡ, 82 ನೇ ವಾರ್ಡ್ ನಿಂದ ಶಾಂತಾ ಹೊನ್ನಪ್ಪ ಕೊಗೊಡ ಅವರಿಗೆ ಟಿಕೆಟ್ ನೀಡಲಾಗಿದೆ.
ಇನ್ನು, ಹು-ಧಾ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾರ್ಡ್ 39 ರಿಂದ ಸೀಮಾ ಎಸ್ ಮೊಗಲಿಶೆಟ್ಟರ್, 41 ವಾರ್ಡ್ ನಿಂದ ಸಂತೋಷ ಚಹ್ವಾಣ, 44 ನೇ ವಾರ್ಡ್ ನಿಂದ ಉಮಾ ಮುಕುಂದ, 45 ನೇ ವಾರ್ಡ್ ನಿಂದ ಮಣಿಕಂಠ ಶ್ಯಾಗೋಟಿ, 49 ನೇ ವಾರ್ಡ ನಿಂದ ವೀಣಾ ಚೇತನ ಬಾರದ್ವಾಡ್, 59 ನೇ ವಾರ್ಡ್ ನಿಂದ ಶ್ವೇತಾ ವಿರೂಪಾಕ್ಷ ರಾಮನಗೌಡ್ರ ಅವರಿಗೆ ಟಿಕೆಟ್ ನೀಡಲಾಗಿದೆ.
ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾರ್ಡ್ ನಂಬರ್ 22 ರಿಂದ ಪಾರ್ವತವ್ವ ಹಿತ್ತಮಲನಿ, 33 ನೇ ವಾರ್ಡ್ ನಿಂದ ಮುರಿಗೆಪ್ಪ ಚನ್ನಪ್ಪ ಹೊರಡಿ ಅವರಿಗೆ ಎರಡನೇ ಪಟ್ಟಿಯಲ್ಲಿ ಅಂತಿಮಗೊಳಿಸಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿರುವ ಅರವಿಂದ ಬೆಲ್ಲದ ಅವರು ಫೈನಲ್ ಮಾಡಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಹುಬ್ಬಳ್ಳಿ, ಧಾರವಾಡದ ಒಟ್ಟು 82 ವಾರ್ಡ್‌ಗಳ ಪೈಕಿ ಒಟ್ಟು 41 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದೆ.