ಧಾರವಾಡ : ಕೆರೆಗೆ ಸ್ನಾನ ಮಾಡಲು ತೆರಳಿದ್ದ ಒಂದೇ ಕುಟುಂಬದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ನಡೆದಿದೆ. ಇಬ್ಬರು ಯುವಕರು ಅಣ್ಣ ತಮ್ಮದಿರಾಗಿದ್ದು, ಶೋಕಾಚಾರಣೆ ಹಬ್ಬದಂದೇ ಇಬ್ಬರು ಯುವಕರ ಸಾವು ಕುಟುಂಬ ಸೇರಿದಂತೆ ಗ್ರಾಮದಲ್ಲಿ ಶೋಕ ಮಡುಗಟ್ಟುವಂತೆ ಮಾಡಿದೆ.
ಕಾಶೀಂ ನದಾಫ್ (23) ಹಾಗೂ ಶರೀಫ್ ನದಾಫ್ (20) ಮೃತ ದುರ್ದೈವಿಗಳಾಗಿದ್ದಾರೆ. ಇನ್ನೂ ಇಬ್ಬರು ಯುವಕರು ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದ ಹಳೇಕೆರೆಗೆ ಸ್ನಾನ ಮಾಡಿಕೊಂಡು ಬರಲು ತೆರಳಿದ್ದರು. ಈ ವೇಳೆ ಕಾಶೀಂನ್ನು ಮೊದಲು ಸ್ನಾನಕ್ಕೆ ಮುಂದಾಗಿದ್ದಾನೆ. ಆದರೆ ಸ್ನಾನಕ್ಕೆ ಮುಂದಾಗಿದ್ದ ಕಾಶೀಂನಿಗೆ ಈಜಲು ಬಾರದೆ ಇರುವುದರಿಂದ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾನೆ. ಇದನ್ನು ಕಂಡ ತಕ್ಷಣವೇ ಸಹೋದರನ ರಕ್ಷಣೆಗೆ ಶರೀಫ್ ಮುಂದಾಗಿದ್ದಾನೆ. ಆದರೆ ಇಬ್ಬರಿಗೂ ಈಜು ಬಾರದೇ ನೀರಿನಲ್ಲಿ ಮುಳುಗಿ ಇಬ್ಬರು ಇಬ್ಬರು ಯುವಕರು ಸಾವನಪ್ಪಿದ್ದಾರೆ.
ಇನ್ನೂ ಸ್ಥಳಿಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಗರಗ ಠಾಣೆಯ ಪೊಲೀಸರು ಗ್ರಾಮಸ್ಥರ ಸಹಾಯದೊಂದಿಗೆ ಯುವಕರ ಮೃತ ದೇಹಗಳನ್ನು ಹೊರಗೆ ತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಎದೆ ಎತ್ತರಕ್ಕೆ ಬೆಳೆದಿದ್ದ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶೋಕಾಚರಣೆ ಹಬ್ಬದಂದೇ ಯುವಕರಿಬ್ಬರ ಸಾವು ಇಡೀ ಗ್ರಾಮದಲ್ಲಿಯೇ ಶೋಕ ಮಡುಗಟ್ಟವಂತೆ ಮಾಡಿದೆ.