ಹುಬ್ಬಳ್ಳಿ : ಈಗಾಗಲೇ ನೇರೆಯ ರಾಜ್ಯಗಳಾದ ಮಹಾರಾಷ್ಟ್ರ ಸೇರಿದಂತೆ ಕೇರಳ ರಾಜ್ಯಗಳಲ್ಲಿ ಕೋವಿಡ್ -19 ವೈರಸ್ ತನ್ನ ಅರ್ಭಟ್ ಮುಂದುವರಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೈರಸ್ ಹರಡುವಿಕೆ ತಡೆಯಲು ಕಠಿಣ ಕೊರೊನಾ ರೂಲ್ಸ್‌ಗಳನ್ನು ಜಾರಿ ಮಾಡಿದೆ. ಆದರೆ ಹುಬ್ಬಳ್ಳಿ ಧಾರವಾಡ ಮಾರುಕಟ್ಟೆ ಪ್ರದೇಶದಲ್ಲಿ ಸರ್ಕಾರದ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ ಜನರು ಹಬ್ಬದ ಸಾಮಗ್ರಿಗಳ ಖರೀದಿಯಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳಿಯ ದುರ್ಗದ್ ಬೈಲ್, ಜನತಾ ಬಜಾರ ಹಾಗೂ ಪೇಡಾ ನಗರಿ ಧಾರವಾಡದ ಸುಭಾಷ್ ರಸ್ತೆ, ನೆಹರು ಮಾರುಕಟ್ಟೆ ಪ್ರದೇಶದಲ್ಲಿ ಹಬ್ಬದ ಸಾಮಗ್ರಿ ಖರೀದಿಗೆ ಜನರು ಹರಿದು ಬರುತ್ತಿದ್ದಾರೆ. ಇಂದು ವರಮಾಹಾಲಕ್ಷ್ಮಿ ಹಾಗೂ ಮೊಹರಂ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಅವಳಿನಗರ ಜನರು ಮಾರುಕಟ್ಟೆ ಪ್ರದೇಶದಲ್ಲಿ ಕೊರೊನಾ ರೂಲ್ಸ್ ಬ್ರೆಕ್ ಮಾಡಿ ಖರೀದಿಗೆ ಮುಗಿ ಬಿದ್ದಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಧಾರವಾಡ ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ಅಧಿಕಾರಿಗಳು ಎಷ್ಟೇ ಕ್ರಮ ಕೈಗೊಂಡರು, ಅವಳಿನಗರದ ಜನತೆ ಮಾತ್ರ ಅದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಶ್ರಾವನ ಮಾಸದಲ್ಲಿ ಸಾಲು ಸಾಲು ಹಬ್ಬಗಳಿದ್ದು, ಇಂತಹ ಸಮಯದಲ್ಲಿ ಸರ್ಕಾರ ಹಾಗೂ ವೈದ್ಯರ ಸಲಹೆಗಳನ್ನು ಪಾಲನೆ ಮಾಡಿಬೇಕಾದ ಜನರು ಈಗ ಮಾರುಕಟ್ಟೆಗಳಲ್ಲಿ ಮಾಸ್ಕ, ಸಾಮಾಜಿಕ ಅಂತರ ಮರೆತು, ಹೂವು ಹಣ್ಣು ಸೇರಿದಂತೆ ಖರೀದಿಯಲ್ಲಿ ತಮ್ಮಗೆ ಬೇಕಾದ ರೀತಿಯಲ್ಲಿ ವರ್ತಿಸುತ್ತಿದ್ದಾರೆ.
3ನೆಯ ಅಲೆ ಆತಂಕವಿದ್ದರೂ ಸಹ ಅದಕ್ಕೆ ಕ್ಯಾರೆ ಎನ್ನದೆ ಜನರು ಖರೀದಿಗೆ ಆಗಮಿಸುತ್ತಿದ್ದು, ಪಾಲಿಕೆಯಿಂದ ಮಾರ್ಷಲ್ ನೇಮಕ ಮಾಡಿದರೂ ಸಹ ಉಪಯೋಗ ಇಲ್ಲದಂತಾಗಿದೆ.