ಹುಬ್ಬಳ್ಳಿ: ಹೋರಾಟಗಾರರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಈಗ ನಮ್ಮ ಸಮಯ ಕೋವಿಡ್-19 ನಿಂದ ಸ್ವಾತಂತ್ರ್ಯರಾಗಬೇಕಾಗಿದೆ ಎಂಬ ಸಂದೇಶ ಇಟ್ಟುಕೊಂಡು ರಕ್ಷಾ ಫೌಂಡೇಶನ್ ಯುವಕರು 75 ನೇ ಸ್ವಾತಂತ್ರ್ಯ ದಿನವನ್ನು ವಿಶಿಷ್ಟವಾಗಿ ಆಚರಣೆ ಮಾಡಿದರು. ಕೊರೋನಾ ಹಲ್ಮೆಟ್ ಧರಿಸಿ ಧಾರವಾಡದಿಂದ ಹುಬ್ಬಳ್ಳಿ ವರೆಗೂ ಬೈಕ್ ರ‌್ಯಾಲಿ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ನಗರದ ಚೆನ್ನಮ್ಮ ವೃತ್ತದಲ್ಲಿ ಈ ಯುವಕರಿಗೆ ಪಾಲಿಕೆ ಮಾರ್ಷಲ್ ಗಳು ಸಾಥ ನೀಡಿದರು. ಈ ಸಂದರ್ಭದಲ್ಲಿ ಸುನಿಲ ಜಂಗಾನಿ, ಕಾರ್ತಿಕ, ಅಕ್ಷಯ ಪಾಟೀಲ, ರೇವಣ್ಣ ಶಿವಪುರೆ, ವಿಶ್ವನಾಥ ಸಂಧಿ, ರಾಹುಲ್ ವಿಲ್ಸನ್, ಗಿರೀಶ್ ನಾಯ್ಕ, ಮಂಜುನಾಥ, ಅಕ್ಷಯ ಎಮ್ಮಿ, ಪ್ರಮೋದ ಕಮತರ, ಗಿರೀಶ್ ಜಾಡರ್, ಕಿರಣ ನಂದಿಹಾಳ, ಸಂತೋಷ, ನಿಖಿಲ್ ಹಿರೇಮಠ, ರೋಹಿತ್ ಸೇರಿದಂತೆ ಮುಂತಾದವರು ಇದ್ದರು.
