ಧಾರವಾಡ : ಮಾರುಕಟ್ಟೆಯಲ್ಲಿ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆಯ ಭದ್ರತೆ ಒದಗಿಸುವ ಕರ್ತವ್ಯದಲ್ಲಿದ್ದ ಮಹಿಳಾ ಎಸಿಪಿ ಅಧಿಕಾರಿಯ ಮೇಲೆ ವ್ಯಕ್ತಿಯೊಬ್ಬ, ಪೆಟ್ರೋಲ್ ಎರಚಿ ಹುಚ್ಚಾಟ ಮೇರೆದಿರುವ ಘಟನೆ ಧಾರವಾಡದ ಸುಪುರ್ ಮಾರುಕಟ್ಟೆ ಪ್ರದೇಶದಲ್ಲಿ ಕಳೆದಿನ ನಡೆದಿದೆ.
ಧಾರವಾಡದ ಸುಪರ್ ಮಾರುಕಟ್ಟೆಯ ಪ್ರದೇಶದಲ್ಲಿ ತಲೆ ಎತ್ತಿದ್ದ ಅನಧಿಕೃತ ಅಂಗಡಿ ತೆರವು ಮಾಡಲು ಹು-ಧಾ ಮಾಹಾನಗರ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದರು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸಿಪಿ ಜಿ.ಅನುಷಾ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಈ ವೇಳೆಯಲ್ಲಿ ಎಂ ಎಂ ಚೌಧರಿ ಎಂಬ ವ್ಯಕ್ತಿ ಎಸಿಪಿ ಅವರ ಮೇಲೆ ಪೆಟ್ರೋಲ್ ಎರಚಿ ತನ್ನ ಮೇಲೆಯು ಪೆಟ್ರೋಲ್ ಹಾಕಿಕೊಂಡು ತೆರವು ಕಾರ್ಯಾಚರಣೆ ಸ್ಥಗಿತಕ್ಕೆ ಒತ್ತಾಯ ಮಾಡಿದ್ದಾನೆ.
ಇನ್ನೂ ಇದನ್ನು ಎಸಿಪಿ ಜಿ. ಅನುಷಾ ಅವರು ಪ್ರಶ್ನಿಸಿದಾಗ, ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಏರುದನಿಯಲ್ಲಿ ಪೆಟ್ರೊಲ್ ಎರಚಿದ ವ್ಯಕ್ತಿ ಚೌಧರಿ ಆಗ್ರಹಿಸಿದ್ದಾನೆ. ಈ ವಿಡಿಯೋ ಈಗ ಸಮಾಜಿಕ ಜಾಲತಾನದಲ್ಲಿ ವೈರಲ್ ಆಗಿದೆ. ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಈ ರೀತಿ ಪೆಟ್ರೋಲ್ ಎರಚುವುದೇ ಸರಿಯೇ ಎಂದು ಪಾಲಿಕೆಯ ಸಹಾಯಕ ಆಯುಕ್ತ ಎಂ.ಬಿ. ಸಬರದ ಪ್ರಶ್ನೆ ಮಾಡಿದರು. ಇನ್ನೂ ಪೊಲೀಸರು ವಶಕ್ಕೆ ಪಡೆಯಲು ಮುಂದಾಗುತ್ತಿದಂತೆ ಚೌಧರಿ ಸ್ಥಳದಿಂದ ಕಾಲ್ಕತ್ತಿದ್ದಾನೆ. ಸದ್ಯ ಈ ಕುರಿತು ಪಾಲಿಕೆಯ ಸಹಾಯಕ ಅಯುಕ್ತರು ಎಂ ಬಿ ಸಬರದ ಅವರು ಶಹರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ, ಅಡಿಯಲ್ಲಿ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.