Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಬೊಮ್ಮಾಯಿ ಬಿಎಸ್ ವೈ ರಬ್ಬರ್ ಸ್ಟಾಂಪ್ ಆಗಲ್ಲ: ಬಸನಗೌಡ ಪಾಟೀಲ್ ಯತ್ನಾಳ

ಬೊಮ್ಮಾಯಿ ಬಿಎಸ್ ವೈ ರಬ್ಬರ್ ಸ್ಟಾಂಪ್ ಆಗಲ್ಲ: ಬಸನಗೌಡ ಪಾಟೀಲ್ ಯತ್ನಾಳ

Spread the love

ಹುಬ್ಬಳ್ಳಿ : ಯತ್ನಾಳಗೆ ಅನ್ಯಾಯ ಆದ ಬಗ್ಗೆ ಸ್ವಾಮೀಜಿ ಗಳು‌ ಹೇಳಿಕೆ ಕೊಟ್ಟಿದ್ದಾರೆ. ನಾನು ಕಾಡಿಬೇಡಿ. ಟೈಯರ್ ಸುಟ್ಟು ಮಂತ್ರಿ ಆಗುವ ವ್ಯಕ್ತಿ ಅಲ್ಲ ಎಂದಿ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ನಮ್ಮ‌ ಬೇಡಿಕೆ ಸಿಎಂ ಬದಲಾವಣೆ ಆಗಬೇಕು ಅಂತಾ ಇತ್ತು, ಈಗ ನಾಯಕತ್ವ ಬದಲಾವಣೆ ಆಗಿದೆ.
ನೋಡರೀ ಒಬ್ಬ ನಾಯಕ ತನ್ನ ಚಾಪು ಇಟ್ಟುಕೊಳ್ಳಬೇಕು.
ಬೊಮ್ಮಾಯಿ ಬಿಎಸ್ ವೈ ನೆರಳು ಆಗಲ್ಲ. ಅವರಿಗೆ ಸ್ವಲ್ಪ ಟೈಂ ಕೊಡಿ. ಬೊಮ್ಮಾಯಿ ಬಿಎಸ್ ವೈ ರಬ್ಬರ್ ಸ್ಟಾಂಪ್ ಆಗಲ್ಲ. ಹಿಂದು ವಿರೋಧಿ ಸಿಎಂ‌ ಆಗಿದ್ದಾರೆ, ಆ ನೋವು ಕಾರ್ಯಕರ್ತರಲ್ಲೂ ಇದೆ.
ಯಾರು ಹಿಂದೆ ಹೊಡಿಸಿದ್ರು,
ಯಾರು ಹೊಡೆತ ತಿಂದರೂ ಅನ್ನೋದು ಎಲ್ಲರಿಗೂ ಗೊತ್ತಿದೆ.
ಪಕ್ಷಕ್ಕೆ ಹಾನಿ ಅಗಬಾರದು ಅಂತಾ ಹೈಕಮಾಂಡ್ ನಿರ್ಣಯ ಕೈಗೊಂಡಿದೆ.
ಹಿಂದೆ ಎಷ್ಟೋ ಜನ ಕಮ್ಯುನಿಸ್ಟ್ ಇದ್ದವರು ಬಿಜೆಪಿಗೆ ಬಂದಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಹೋಗುವ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದರು.

ಹಿಂದೆ ಮೂರು ಜನ ಡಿಸಿಎಂ ಆಗಿದ್ರು ಅವರು ನಮ್ಮ ನೇತೃತ್ವದಲ್ಲಿ ಚುನಾವಣೆ ನಡೆಯುತ್ತೆ ಅಂತಿದ್ರು. ಈಗ ಡಿಸಿಎಂ ಸ್ಥಾನವೇ ಇಲ್ಲ ಎಂದು ವ್ಯಂಗ್ಯವಾಡಿದರು.ನಾನು ಜೀರೋ ಇಂದ ಹೀರೋ ಆದವನು. ಹಿಂದೆ ಜೀರೋ ಆಗಿ ಈಗ ಮತ್ತೆ ಹೀರೋ ಆಗಿದ್ದೇನೆ.
ದೆಹಲಿಯಲ್ಲಿ ಶಾಸಕರ ಲಾಭಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮಂತ್ರಿ ಸ್ಥಾನಕ್ಕೆ ಲಾಭಿ ನಡೆಸುವುದು ಸರಿಯಲ್ಲ.
ಸೂತ್ರಧಾರರೊಬ್ಬರು ಮಗು ಚುಟಿ. ತೊಟ್ಟಿಲು ತೂಗುತ್ತಿದ್ದಾರೆ. ಈಗ ಸೂತ್ರಧಾರರ ಶಿಷ್ಯರೇ ಜಗಳ ತಗೆಯುತ್ತಿದ್ದಾರೆ ಎಂದರು.

ಸುಮ್ಮನೆ ಜಾರಕಿಹೊಳಿಯವರನ್ನ ಸಿಗಸಿ ಮುಗಿಸಿ ಬಿಟ್ಟು. ಶೆಟ್ಟರ್ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರ ತ್ಯಾಗಕ್ಕೆ ಅಭಿನಂದನೆ ಸಲ್ಲಿಸುವೆ. ಶೆಟ್ಟರ್ ತ್ಯಾಗದಿಂದ ಪ್ರತಿರೂಪವಾಗಿ ಬೊಮ್ಮಾಯಿ ಬಂದಿದ್ದಾರೆ. ನಮ್ಮನ್ನ ಮಂತ್ರಿನೂ ಮಾಡಲಿಲ್ಲ. ಮಂತ್ರಿ ಮಾಡದಿದ್ದರೂ ದುಃಖ ಇಲ್ಲ.ಬೆಲ್ಲದ ಸಿಎಂ‌ ಆಗುವ ಕನಸು ಕಂಡರು. ಬೆಲ್ಲದ್ ಹೆಗಲ ಮೇಲೆ ಯಾರೋ ಬಂದೂಕು ಇಟ್ಟರು. ಕೆಲವರು ಬದನಿಗೂಟನೂ ಇಡ್ತಾರೆ. ನನಗೆ ಚೂಟಿದ್ರೆ ನಾನು ಅವರ ಕಪಾಳಕ್ಕೆ ಹೊಡೆಯುತ್ತಿದ್ದೆ.
ನನಗೆ ಅನ್ಯಾಯ ಆಗಿಲ್ಲ ಎಂದರು.

ಬಿಎಸ್ ವೈ ವಿರುದ್ದ ನಾನು ಮಾತನಾಡಿದಕ್ಕೆ ಮಂತ್ರಿ ಸ್ಥಾನ ಸಿಗಲಿಲ್ಲ ಅನ್ನಬೇಡಿ.
ನನ್ನ ವಿರೋಧ ಕಟ್ಟಿಕೊಂಡಿದ್ದಕ್ಕೆ ಬಿಎಸ್ ವೈ ಸ್ಥಾನ ಕಳೆದುಕೊಂಡರು.
ಸೋಮಣ್ಣ ಬೇವಿನಮರದ ಬೊಮ್ಮಾಯಿ ವಿಶ್ವಾಸಘಾತಕ ಅಂತಾ ಹೇಳಿರುವುದು ಅವರ ವೈಯಕ್ತಿಕ ವಿಚಾರ.
ಬೊಮ್ಮಾಯಿ ಅಧಿಕಾರ ಪೂರ್ಣಗೊಳಿಸಲಿ ಅಂತಾ ಚಾಮುಂಡೇಶ್ವರಿ ಬಳಿ ಬೇಡಿಕೊಳ್ಳುವೆ
ನಾನು ಕನಸು ಕಂಡಿಲ್ಲ. ಆಸೆ‌ ನಿರಾಸೆ ರಾಜಕಾರಣದಲ್ಲಿ ಸಹಜ. ಯತ್ನಾಳ ನಾಲಿಗೆ ಹರಿಬಿಟ್ಟದಕ್ಕೆ ಸ್ಥಾನ ತಪ್ಪಿಲ್ಲ. ನಾನು ನಾಲಿಗೆ ಹರಿಬಿಟ್ಟಿದಕ್ಕೆ ಸಿಎಂ ಬದಲಾದ್ರು ಎಂದರು.

ವಿಜಯೇಂದ್ರ ಇನ್ನೂ ಸ್ವಲ್ಪ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.
ಕಾವೇರಿಯಲ್ಲಿನ ಕೆಲ ದೃಶ್ಯಗಳ ಬಗ್ಗೆ ನನಗೆ ಮಾಹಿತಿ ಇದೆ.
ಇನ್ನೊಂದು ವಾರ ತಡೆದುಕೊಳ್ಳಿ ಎಲ್ಲವನ್ನೂ ಹೇಳುವೆ.
ನನ್ನ ಮಂತ್ರಿ ಸ್ಥಾನ ಸಿಗದಿದ್ದಾಗ ಸ್ವಾಮೀಜಿ ಹೇಳಿಕೆ ಕೊಡುವೆ ಅಂದ್ರು. ಆದ್ರೆ ನಾನೇ ಬೇಡ ಅಂದೆ.
ಬಿಎಸ್ ವೈ ಮೇಲಿನ ನ ಒತ್ತಡದಿಂದ ಬೊಮ್ಮಾಯಿ ಸಿಎಂ‌ ಆಗಿದ್ದಾರೆ.
ಬೊಮ್ಮಾಯಿ ಬಿಎಸ್ ವೈ ನೆರಳು ಆಗಲ್ಲ.. ಅವರು
ಆಗಲ್ಲ. ಯಾಕಂದ್ರೆ ಆ ಕುರ್ಚಿಯ ಮಹಿಮೆ ಹಾಗಿರುತ್ತೆ.
ಬೊಮ್ಮಾಯಿ, ಬಿಎಸ್ ವೈ ನೆರಳು ಆಗಿದ್ರೆ. ಬಿಎಸ್ ವೈ ನೇಮಕ ಮಾಡಿದ ಸಿಬ್ಬಂದಿಗಳೆ ಮುಂದುವರೆಯುತ್ತಿದ್ದರು ಎಂದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]