ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿರುವ ದಿವಂಗತ ಮಾಜಿ ಸಿಎಂ .ಎಸ್.ಆರ್.ಬೊಮ್ಮಾಯಿಯವರ ಪ್ರತಿಮಗೆ ಹಾಲಿ ಸಿಎಂ ಬಸವರಾಜ ಬೊಮ್ಮಾಯಿವರ ಪುತ್ರ ಭರತ ಬಸವರಾಜ ಬೊಮ್ಮಾಯಿಯವರು ಮಾಲಾರ್ಪಣೆ ಮಾಡಿ ಅಜ್ಕನ ಆರ್ಶಿವಾದ ಪಡೆದುಕೊಂಡರು.
ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಮ್ಮ ತಂದೆಯರು ಸಿಎಂ ಅದ ಬಳಿಕ ಮೊದಲ ಭಾರಿಗೆ ಹುಬ್ಬಳ್ಳಿಗೆ ಬಂದಿದ್ದೆ. ನಾನು ಉದ್ಯಮ ಕ್ಷೇತ್ರದಲ್ಲಿದ್ದೇನೆ. ತಂದೆಯವರಿಗೆ ಎಲ್ಲಾ ರಾಜಕೀಯ ಮತ್ತು ಅಡಳಿತ ಗೊತ್ತಿದೆ. ಅವರೆಲ್ಲಾ ಮ್ಯಾನೇಜ್ ಮಾಡುತ್ತಾರೆ. ಅಜ್ಜನವರ ಆಶಿರ್ವಾದ ಪಡೆಯಲು ಬಂದಿದ್ದೆನೆ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಪುತ್ರ ಭರತ್ ಬೊಮ್ಮಾಯಿ ಹೇಳಿದರು.
ಇನ್ನೂ ಸಿಎಂ ಪುತ್ರ ಭರತ ಬೊಮ್ಮಾಯಿ ಅವರು ಅಜ್ಜನ ಮೂರ್ತಿ ಆವರಣದಲ್ಲಿ ಸಸಿ ನೆಡುವ ಮೂಲಕ ದಿವಂಗತ ಮಾಜಿ ಮುಖ್ಯಮಂತ್ರಿ .ಎಸ್.ಆರ್.ಬೊಮ್ಮಾಯಿಯವರಿಗೆ ಗೌರವ ಸೂಚಿಸಿದರು.