ಅಖಿಲ ಭಾರತ ಪಂಚಮಸಾಲಿ ಮಹಾಸಭಾ ನೂತನ ಅಧ್ಯಕ್ಷ ಹುಬ್ಬಳ್ಳಿ ವಿಜಯಾನಂದ ಕಾಶಪ್ಪನವರ ಸನ್ಮಾನ ಅಖಿಲ ಭಾರತ ಪಂಚಮಸಾಲಿ ಮಹಾಸಭಾ ನೂತನ ಅಧ್ಯಕ್ಷರಾಗಿ ಪ್ರಪ್ರಥಮ ಭಾರಿಗೆ ಹುಬ್ಬಳ್ಳಿ ನಗರಕ್ಕೆ ಆಗಮಿಸಿದ ಮಾಜಿ ಶಾಸಕ ಹಾಗೂ ಯುವ ನೇತಾರ ಶ್ರೀ ವಿಜಯಾನಂದ ಕಾಶಪ್ಪನವರ ರವರನ್ನು ಉಣಕಲ್ಲ ಶ್ರೀಗರ ಕ್ರಾಸ್ ಬಳಿ ಇರುವ ಶ್ರೀ ಕೇದಾರ ಗ್ರಾನೈಟ್ ಆವರಣದಲ್ಲಿ ಸಮಾಜ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜಕ್ಕೆ ಹೆಚ್ಚಿನ ಸ್ಥಾನಮಾನ ಕಲ್ಪಿಸಲು ರಾಜಕೀಯ ಪಕ್ಷಗಳ ಮೇಲೆ ಒತ್ತಡ ತರಬೇಕೆಂದು ಸಮಾಜ ಬಾಂಧವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ಗಂಗಾಧರ ದೊಡವಾಡ ಶಂಕರ ಮಲಕಣ್ಣವರ ರಾಜಣ್ಣ ಕೊಟಗಿ ನಿಂಗಪ್ಪ ಹುಲಿಕಟ್ಟಿ ಗಂಗಾಧರ ನೀಲಣ್ಣವರ ಶಿವಾನಂದ ಮಾಯಕಾರ ವೀರಣ್ಣ ನೀರಲಗಿ ವೀರಭದ್ರ ಅಮ್ಮಿನಬಾವಿ ಪ್ರಕಾಶ ಮಾಯಕಾರ ಗಂಗಾಧರ ತೊರಗಲ್ಲ ಪ್ರವೀಣ ದನದಮನಿ ರವಿ ಉಣಕಲ್ಲ ಅಭಿಮನ್ಯು ರೆಡ್ಡಿ ನೀಲಪ್ಪ ದೊಡಮನಿ ಮುಂತಾದವರು ಉಪಸ್ಥಿತರಿದ್ದರು.
