ಹುಬ್ಬಳ್ಳಿ : ಬಿಜೆಪಿ ಸರ್ಕಾರಕ್ಕೆ ರಾಜ್ಯದ ಜನರ ಹಿತ ಬೇಕಾಗಿಲ್ಲ. ಅವರಿಗೆ ಅಧಿಕಾರ ಅಷ್ಟೇ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೋದ ಭಾರಿಯ ನೆರೆಯ ಪರಿಹಾರವೇ ಜನರಿಗೆ ಸಿಕ್ಕಿಲ್ಲ, ಅವರೇನು ಮಾಡಲಿಲ್ಲ, ಮನೆ ಬಿದ್ದಿದಕ್ಕೆ 5 ಲಕ್ಷ ಕೊಡ್ತಿನಿ ಅಂದಿದ್ರು ಏನು ಕೊಟ್ಟಿಲ್ಲ. ಕೇಂದ್ರ ಸರ್ಕಾರ ಕೊಡಲಿಲ್ಲ, ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ. ಬಿಜೆಪಿಯವರು ಪ್ರವಾಸ ಮಾಡ್ಕೊಂಡು ರೆಸ್ಟ್ ತೊಗೊಳ್ಳಿ. ಹಾಗಾಗಿ ನಾವು ಜನರ ಬಳಿ ಹೋಗುತ್ತೇವೆ. ಜನ ಕಾಯ್ತಿದ್ದಾರೆ, ಮತದಾರ ಕಾಯ್ಕೊಂಡು ನಿಂತಿದ್ದಾರೆ. ಅವರು ಓಟ್ ಮಾಡುವಾಗ ತೋರಿಸುತ್ತಾರೆ ಎಂದರು.