ಹುಬ್ಬಳ್ಳಿ : ಮಾಜಿ ಶಾಸಕ ಹಾಗೂ ಜೆಡಿಎಸ್ ಯುವ ಮುಖಂ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದು ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ,ಇನ್ನೂ ಹಲವು ನಾಯಕರು ಸದ್ಯದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿಂದು ಮಾತಾನಾಡಿದ ಅವರು, ದಿ.ಮಾಜಿ ಸಿಎಮ್ ಅವರ ಪುತ್ರ ಮಧು ಬಂಗಾರಪ್ಪ ಅವರು ಪಕ್ಷದ ಆಡಳಿತ ನೀತಿ ಹಾಗೂ ಡಿಕೆಶಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಕಾರ್ಯನಿರ್ವಹಿಸಲು ಇಂದಯ ಪಕ್ಷಕ್ಕೆ ಸೇರ್ಪಡೆಯಾದರು, ಇನ್ನು ನೆರೆಯಿಂದ ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ.ಆದ್ರೆ ಕೇಂದ್ರದಿಂದ ನೈಯಾಪೈಸೆ ಹಣ ಬಂದಿಲ್ಲ. ನಮ್ಮ ರಾಜ್ಯದ 25 ಜನ ಸಂಸದರು ಏನೂ ಮಾಡ್ತಾ ಇದ್ದಾರೆ.ಇಲ್ಲಿ ಹುಲಿಗಳಂತೆ ಘರ್ಜನೆ ಮಾಡ್ತಾರೆ,ಮೋದಿ ಮುಂದೆ ಹೋದ್ರೆ ಇವರೆಲ್ಲರೂ ಇಲಿಗಳಾಗ್ತಾರೆ,ಎಂದು ಬಿಜೆಪಿ ಸಂಸದರು ವಿರುದ್ಧ ಕಿಡಿ ಕಾರಿದರು.