ಹುಬ್ಬಳ್ಳಿ : ಉಣಕಲ್ ಕೆರೆ ನೀರು ತುಂಬಿ ಕೋಡಿ ಹರಿಯುವ ಜಾಗೆಯಿಂದ ಆರಂಭಗೊಳ್ಳುವ ರಾಜಕಾಲುವೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಮತ್ತು ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಹಾದು ಮುಂದೆ ನೇಕಾರ ನಗರದ ಮೂಲಕ ಕಾಳಿ ನದಿಯತ್ತ ಸಾಗುತ್ತದೆ ಉಣಕಲ್ಲ ದಿಂದ ಹುಬ್ಬಳ್ಳಿ ನಗರ ದಾಟುವವರೆಗೆ ಅಂದಾಜು ಆರು ಕಿಲೋಮೀಟರ್ ಇರುವ ಈ ರಾಜಕಾಲುವೆಗೆ ಸುಭಧ್ರ ತಡೆಗೋಡೆ ಸರಿಯಾದ ಭದ್ರತೆ ಇರುವುದಿಲ್ಲ ಅಕ್ಕಪಕ್ಕದ ನಿವಾಸಿಗಳು ಸಣ್ಣ ಮಕ್ಕಳು ಮಹಿಳೆಯರು ದನಕರುಗಳಿಗೆ ಯಾವುದೇ ಭದ್ರತೆ ಇರುವುದಿಲ್ಲ ಹೀಗಾಗಿ ಈ ರಾಜಕಾಲುವೆಯನ್ನು ವಿಶೇಷ ಅನುದಾನದಲ್ಲಿ ಮಹಾನಗರಪಾಲಿಕೆ ಮತ್ತು ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಿಸುವುದು ಅವಶ್ಯವಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಗಂಗಾಧರ ದೊಡವಾಡ ಜಿಲ್ಲಾ ಆಡಳಿತವನ್ನು ಒತ್ತಾಯಿಸಿದ್ದಾರೆ.ಉಣಕಲ್ಲ ಕೆರೆ ನೀರನ್ನು ನಾಲ್ಕು ದಶಕದ ಹಿಂದೆ ಹುಬ್ಬಳ್ಳಿ ನಗರಕ್ಕೆ ದೈನಂದಿನ ಬಳಕೆಗಾಗಿ ಹಾಗೂ ಕುಡಿಯುವದಕ್ಕಾಗಿ ಉಪಯೋಗಿಸಲಾಗುತ್ತಿತ್ತು.ಹೀಗಾಗಿ ಇದೇ ರಾಜಕಾಲುವೆ ಮುಖಾಂತರ ಕೆರೆಯ ನೀರನ್ನು ಹುಬ್ಬಳ್ಳಿ ಮತ್ತುಕಲಘಟಗಿ ತಾಲೂಕಿನ ಕೆಲವು ಹಳ್ಳಿಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಿದೆ ಎಂದರು.
