ಹುಬ್ಬಳ್ಳಿ : ಇಲ್ಲಿನ ನವನಗರದಿಂದ ಪ್ರವಾಸ ಸ್ಥಳ ನೋಡಲು ಬಂದಿದ್ದ ಆರು ಜನ ಯುವಕರು ನಿನ್ನೆಯಿಂದಲೇ ನಾಪತ್ತೆಯಾಗಿರುವ ಘಟನೆ ಶಿರ್ಲೆ ಫಾಲ್ಸ್ ನಲ್ಲಿ ನಡೆದಿತ್ತು. ಆದರೆ ಅದೃಷ್ಟವಶಾತ್ ಯುವಕರು ಯಲ್ಲಾಪುರ ಕಾಡಿನಲ್ಲಿ ಪತ್ತೆಯಾಗಿದ್ದು, ಸುರಕ್ಷಿತವಾಗಿ ಯಲ್ಲಾಪುರ ಪೊಲೀಸ್ ಠಾಣೆಗೆ ಕರೆತರಲಾಯಿತು.
ಹೌದು.. ನವನಗರದಿಂದ ಹೋಗಿದ್ದ ಆಸೀಫ ಮಕಬುಲಸಾಬ ಡಾಲಾಯಿತ್, ಅಹ್ಮದ ಸೈಯ್ಯದ ಶೇಖ, ಅಬತಾಬ್ ಸದ್ದಾಂ ಶಿರಹಟ್ಟಿ, ಮಾಬುಸಾಬ ಮಕಬುಲಸಾಬ ಶಿರಹಟ್ಟಿ, ಶಾನು ಬಿಜಾಪುರಿ ಹಾಗೂ ಇಮ್ತಿಯಾಜ್ ನೀರಸಾಬ ಮುಲ್ಲಾನವರ ಎಂಬುವವರೇ ಕಾಡಿನಲ್ಲಿ ಪತ್ತೆಯಾಗಿದ್ದಾರೆ.
ಇನ್ನೂ ಯಲ್ಲಾಪುರ ಸಮೀಪದ ಶಿರ್ಲೆ ಪಾಲ್ಸ್ ಬಳಿಯಲ್ಲಿ ಇವರ ಮೂರು ಸ್ಕೂಟಿಗಳು ಸಿಕ್ಕಿದ್ದು, ಯುವಕರು ನಾಪತ್ತೆಯಾಗಿದ್ದಾರೆ ಎಂದು ಕುಟುಂಬದವರು ಆತಂಕಗೊಂಡಿದ್ದು, ಯುವಕರು ಸುರಕ್ಷಿತವಾಗಿರುವ ಸುದ್ಧಿ ಕೇಳಿ ನಿಟ್ಟುಸಿರು ಬಿಟ್ಟಿದ್ದಾರೆ.