ಹುಬ್ಬಳ್ಳಿ :ನಟ ತೂಗುದೀಪ ದರ್ಶನರವರ ತೇಜೋವಧೆ ಮಾಡಿರುವ ಇಂದ್ರಜಿತ್ ಲಂಕೇಶ್ ರವರು ಬಹಿರಂಗ ಕ್ಷಮೆಯಾಚಿಸಬೇಕೆಂದು ಅಖಿಲ ಕರ್ನಾಟಕ ದರ್ಶನ ತೂಗುದೀಪ ಅಭಿಮಾನಿಗಳ ಸಂಘ ತಹಶಿಲ್ದಾರರಿಗೆ ಮನವಿ ಸಲ್ಲಿಸಿತು.
ನಟ ದರ್ಶನ ಬಗ್ಗೆ ಇಂದ್ರಜಿತ್ ಲಂಕೇಶ್ ಅನಾವಶ್ಯಕ ಹೇಳಿಕೆಗಳನ್ನು ನೀಡಿದ್ದಾರೆ. ಅವರು ನೀಡಿರುವ ಹೇಳಿಕೆಗಳು ಸತ್ಯಕ್ಕೆ ದೂರ. ಇನ್ನೂ ದರ್ಶನ ಅವರ ತೇಜೋವಧೆ ಮಾಡುವ ಬರದಲ್ಲಿ ಇಂದ್ರಜಿತ್ ಲಂಕೇಶ್ ಮೈಸೂರು ಪೋಲಿಸರು ಬಳೆ ತೊಟ್ಟಿದ್ದಾರೆ, ಪೋಲಿಸ್ ಠಾಣೆಗಳು ಸೆಟಲ್ ಮೆಂಟ್ ಸ್ಟೇಷನ್ ಗಳಾಗಿ ಮಾರ್ಪಾಟ್ಟಿವೆ ಎಂದು ಹೇಳುವ ಮೂಲಕ ಪೋಲಿಸ ಇಲಾಖೆಯ ತೇಜೋವಧೆ ಮಾಡಿದ್ದಾರೆ. ಅಲ್ಲದೇ ಸೆಲೆಬ್ರಿಟಿಗಳು ಬುದ್ದಿಗೇಡಿಗಳು, ಹೋರಾಟಗಾರ ಎಂಬ ಮುಖವಾದ ಹಾಕಿಕೊಂಡು ವ್ಯಕ್ತಯೊಬ್ಬನಿಗೆ ದಲಿತ ಎಂದು ಜಾತಿ ನಿಂದನೆ ಮಾಡಿದ್ದಾರೆ. ದರ್ಶನ ಹಿಂಬಾಲಕರು, ಅಭಿಮಾನಿಗಳನ್ನು ರೌಢಿಗಳೆಂದು ಕರೆದು ಅಭಿಮಾನಿಗಳ ಭಾವನೆಗೆ ಧಕ್ಕೆ ತಂದು ಅಭಿಮಾನಿಗಳ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ. ಈ ಕೂಡಲೇ ಇಂದ್ರಪ್ರಸ್ಥ ಲಂಕೇಶ್ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ದರ್ಶನ ಅಭಿಮಾನಿಗಳೆಲ್ಲಾ ಸೇರಿಕೊಂಡು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೋಪಾಲ, ರಾಜು, ಚಿರಂಜೀವಿ, ಗಂಗಾಧರ, ರಿಯಾಜ್, ಗಣೇಶ, ಶಿವು, ಅಭಿಷೇಕ, ಗಿರೀಶ ಸೇರಿದಂತೆ ಮುಂತಾದವರು ಇದ್ದರು.