ಹುಬ್ಬಳ್ಳಿ : ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದ
ಯುವಕನ ದೇಹವನ್ನು ಅಗ್ನಿಶಾಮಕ ಸಿಬ್ಬಂದಿಗಳು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಉಣಕಲ್ ಟಿಂಬರ್ ಯಾರ್ಡ್ ನಿವಾಸಿಯಾಗಿದ್ದ ಸಚಿನ್ ಮಾನೆ (22) ಮೃತ ಯುವಕನಾಗಿದ್ದು, ಇತ ಕಳೆದ ಎರಡು ದಿನದ ಹಿಂದೆ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಗೋಕುಲ ಗ್ರಾಮದ ಕೆರೆಗೆ ಹತ್ತಿರ ಹೋಗಿದ್ದ, ಈ ವೇಳೆ ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದ, ಆದರೆ ಮೃತನ ದೇಹ ಮಾತ್ರ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ಡಿಎಫ್ ಓ ವಿನಾಯಕ ಕಲಘುಟಕರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಂದು ಸಚಿನ ಮಾನೆ ಅವರ ಮೃತ ದೇಹವನ್ನು ಹೊರ ತೆಗೆದಿದ್ದಾರೆ.