ಹುಬ್ಬಳ್ಳಿ : ಬೈಕ್ ಸ್ಕೀಡ್ ಆದ ಪರಿಣಾಮ ಸ್ಥಳದಲ್ಲೇ ಇಬ್ಬರು ಯುವಕರು ಸಾವನಪ್ಪಿರುವ ಘಟನೆ ನಗರದ ಆಕ್ಸ್‌ಫರ್ಡ್ ಕಾಲೇಜು ಹತ್ತಿರ ಇರುವ ಬ್ರಿಡ್ಜ್ ಬಳಿ ತಡರಾತ್ರಿ ನಡೆದಿದೆ.
ಹುಬ್ಬಳ್ಳಿಯಿಂದ ಬಿಜಾಪುರ ಕಡೆ ಪ್ರಯಾಣ ಮಾಡುತ್ತಿದ್ದ ಸಂತೋಷ (೨೩) ಭಿಮಾನಂದ ಮಾರತಿಗಸ್ತಿ ಎಂಬ ಯುವಕರು ಕುಕ್ಕೆ ಸುಬ್ರಹ್ಮಣ್ಯ ಗೆ ಹೋಗಿ ಮರಳಿ ತಮ್ಮ ಊರಿಗೆ ಹೋಗುವ ಸಂದರ್ಭದಲ್ಲಿ ಎನ್.ಎಸ್ ಬೈಕ್ ಸ್ಕೀಡ್ ಆಗಿದ್ದು ಇಬ್ಬರು ಯುವಕರು ಸ್ಥಳದಲ್ಲೇ ಸಾವನಪ್ಪಿದ್ದಾರೆ.ಇವೊಂದು ಘಟನೆಗೆ ಒವರ್ ಸ್ಪೀಡ್ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಯುವಕರ ಮೃತ ದೇಹವನ್ನು ಕಿಮ್ಸ್ ರವಾನಿಸುಲಾಗಿದೆ.ಇನ್ನೂ ಘಟನಾ ಪೂರ್ವ ಸಂಚಾರಿ ಪೋಲಿಸರು ಸ್ಥಳಕ್ಕೆ ಬೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಸಿಕೊಂಡಿದ್ದಾರೆ…