ಹುಬ್ಬಳ್ಳಿ: ಲೋಕೋಪಯೋಗಿ ಇಲಾಖೆಯ 5 ಕೋ.ರೂ. ಅನುದಾನದಲ್ಲಿ ಕೈಗೊಂಡಿರುವ ಇಲ್ಲಿನ ವಾರ್ಡ್ ನಂ.53ರ ಕಮರಿಪೇಟೆ ಮುಖ್ಯರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಶಾಸಕ ಪ್ರಸಾದ ಅಬ್ಬಯ್ಯ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈ ಹಿಂದೆ ಈ ಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯಂತೆ ಇದೀಗ ಕಾಂಕ್ರೀಟಿಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈಗಾಗಲೇ ಕಮರಿಪೇಟೆಯ ದಿವಟೆ ಓಣಿ, ಕುಂಬಾರ ಓಣಿ, ಟುಮಕೂರ ಓಣಿ ಪ್ರದೇಶದ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಮರಿಪೇಟೆ ಭಾಗದ ಎಲ್ಲ ರಸ್ತೆಗಳು ಕಾಂಕ್ರೀಟಿಕರಣಗೊಂಡು ಈ ಭಾಗಕ್ಕೆ ಹೊಸ ಮೆರಗು ದೊರೆಯಲಿದೆ ಎಂದರು.
ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ, ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಕಮರಿಪೇಟೆ ಎಸ್ ಎಸ್ ಕೆ ಸಮಾಜ ಪಂಚ ಕಮಿಟಿ ಟ್ರಸ್ಟಿಗಳಾದ ಪ್ರೇಮನಾಥಸಾ ಕಾಟವೆ, ಕಾಶಿನಾಥ್ ಖೋಡೆ, ಕೃಷ್ಣನಾಥ ಕಬಾಡೆ, ಎನ್.ಡಿ. ಕಾಟವೆ, ಮುಖಂಡರಾದ ಪ್ರಕಾಶ್ ಬುರಬುರೆ, ಮಲ್ಲಾರಿ ಹಬೀಬ, ಆನಂದ್ ಬದ್ದಿ, ಕಿಟ್ಟು ಲದವಾ, ಮಂಜು ಟೇಲರ, ಯಲ್ಲಪ್ಪ ಮೆಹರವಾಡೆ, ಲಕ್ಷ್ಮಣಸಾ ಖೋಡೆ, ರಾಜು ಕಲಬುರ್ಗಿ, ನಾಗು ಕಾಟಿಗರ, ರಾಜೇಶ್ವರಿ ಹಬೀಬ, ಸುನೀತಾ ಪಿ. ಬುರಬುರೆ, ಭಾರತಿ ಬದ್ದಿ, ಲಕ್ಷ್ಮಿ ಕಾಟಿಗರ, ಲಕ್ಷ್ಮಿ ಗಂಗನೂರ, ರತ್ನಾ ಬದ್ದಿ, ಇತರರು ಇದ್ದರು.