ಹುಬ್ಬಳ್ಳಿ : ವೃದ್ಧನೊಬ್ಬ ರಸ್ತೆ ದಾಟುವಾಗ ಅಪರಿಚಿತ ಕಾರವೊಂದು ಗುದ್ದಿದ ಪರಿಣಾಮ, ವೃದ್ಧನಿಗೆ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತಿದ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾನೆ.
ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದ ಮಾರುತಿ ನಗರದ ಬಳಿ ಬುಧವಾರ ತಡರಾತ್ರಿ
ನವಲಗುಂದ ತಾಲ್ಲೂಕಿನ ಕೀರೆಸೂರ ಗ್ರಾಮದ ಬಾಬು ಕನಕನ್ನವರ ಎಂಬ ವೃದ್ಧನೊಬ್ಬ ರಸ್ತೆ ದಾಟುವ ಸಂದರ್ಭದಲ್ಲಿ, ಬ್ಲ್ಯಾಕ್ ಕಲರ್ ಇರುವ ಕಾರವೊಂದು ಡಿಕ್ಕಿ ಹೊಡೆದಿತ್ತು. ಇನ್ನು ಡಿಕ್ಕಿ ಹೊಡೆದ ನಂತರ ಕಾರ್ ನಿಲ್ಲಿಸದೇ ಸ್ಥಳದಿಂದ ಕಾಲಕಿತ್ತು ಚಾಲಕ ಕಾರ ಸಮೇತ ಪರಾರಿಯಾಗಿದ್ದ. ಇನ್ನು ಸ್ಥಳೀಯರ ಸಹಾಯದಿಂದ ವೃದ್ಧನನ್ನು ಹುಬ್ಬಳ್ಳಿ ಕಿಮ್ಸ್ ಗೆ ರವಾನಿಸಿದ್ದಾರೆ. ಈ ಕುರಿತು ಮೃತನ ಹೆಂಡತಿ ಸಾವಕ್ಕ ಹುಬ್ಬಳ್ಳಿ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಕಾರ್ ಹಾಗೂ ಚಾಲಕನ ಪತ್ತೆಗಾಗಿ ಬಲೆ ಬಿಸಿದ್ದಾರೆ.
