ಹುಬ್ಬಳ್ಳಿ : ಉತ್ತಮ ಪ್ರಜಾಕೀಯ ಪಕ್ಷ ಮುಂಬರುವ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಅಂತಿಮ ತೀರ್ಮಾನ ಮಾಡಲಾಗಿದ್ದು ಸ್ಪರ್ಧಾ ಳುಗಳನ್ನು ಜನರೇ ಆಯ್ಕೆ ಮಾಡುತ್ತಾರೆ ಎಂದು
ಉತ್ತಮ ಪ್ರಜಾಕೀಯ ಪಕ್ಷ ದ ಸಂತೋಷ ನಂದೂರ ಹೇಳಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿನಗರದ 82 ವಾರ್ಡ್ ಗಳಿಗೆ ಪಾಲಿಕೆ ಚುನಾವಣೆಗೆ ಪ್ರಜಾಕೀಯ ಸ್ಪರ್ಧೆ ಮಾಡುತ್ತಿದ್ದು, ಸ್ಪರ್ಧೆ ಮಾಡುವ ಅಭ್ಯರ್ಥಿ ಈ ಕ್ಷೇತ್ರದ ಬಗ್ಗೆ ತಿಳಿವಳಿಕೆ ಹೊಂದಿರಬೇಕು. ಇದರೊಂದಿಗೆ ಪ್ರಾಮಾಣಿಕವಾಗಿ ಸಮಾಜದ ಜನರ ಅಭಿವೃದ್ಧಿಗೆ ಸ್ಥಿರವಾಗಿ ಕೆಲಸ ಮಾಡು ವಂತಿರಬೇಕು ಎಂಬ ನಿಯಮಗಳಿವೆ ಎಂದು ತಿಳಿಸಿದರು.
ಚುನಾವಣೆಗೆ ಸ್ಪರ್ಧೆ ಮಾಡುವ ಅಭ್ಯರ್ಥಿಗಳನ್ನು ಮೊದಲು ಪರೀಕ್ಷೆ, ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಪ್ರಜಾಕೀಯ ಪಕ್ಷ ದ ನೀತಿ ನಿಯಮಗಳಿಗೆ ಬದ್ಧವಾ ಗಿರಬೇಕು ಮಾಹಿತಿ ನೀಡಬೇಕು.
ಪ್ರಜಾಕೀಯ ಪಕ್ಷದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ನಾಯಕರೇ ಇಲ್ಲಿ ಪ್ರತ್ಯೇಕ ನಾಯಕರಾಗಲಿ, ಹುದ್ದೆಗಳಾಗಲಿ ಇಲ್ಲ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಿಕೆಟ್ ಆಕಾಂಕ್ಷಿಗಳಾದ ನಮ್ರತಾ ಮಿಶ್ರಾ, ಪ್ರವೀಣ ಪಾಟೀಲ್, ರಾಮು ಖಾನಾಪೇಟ್, ಬಸವರಾಜ ಬಾಗಲಕೋಟೆ, ಗಿರೀಶ ಕೆ, ದೀಪಕ ಲದವಾ ಹಾಗೂ ಶಿವನಗೌಡರ ಇದ್ದರು.
