ಹುಬ್ಬಳ್ಳಿ : ವ್ಯಕ್ತಿಯೋರ್ವರಿಗೆ ತುಂಡಾದ ಗಾಳಿಪಟದ ದಾರ ಕುತ್ತಿಗೆಗೆ ಸಿಕ್ಕು ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದ ವಿಕಾಸ್ ನಗರದಲ್ಲಿ ಬೈಕಿನಲ್ಲಿ ತೆರಳುತ್ತಿದ್ದಾಗ
ಶ್ರೀಧರ್ ಕಲ್ಬುರ್ಗಿ ಎನ್ನುವವರಿಗೆ ಗಾಳಿಪಟದ ದಾರ ಕುತ್ತಿಗೆಗೆ ಸಿಕ್ಕು ಪರಿಣಾಮ ಕುತ್ತಿಗೆಗೆ ಗಂಭೀರವಾಗಿ ಗಾಯವಾಗಿ ತೀವ್ರವಾದ ರಕ್ತಸ್ರಾವವಾಗಿದೆ.
ಗಾಯಗೊಂಡ ಶ್ರೀಧರ್ ಕಲ್ಬುರ್ಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದರೆ. ಕುತ್ತಿಗೆ ಭಾಗಕ್ಕೆ ಮೂರು ಹೊಲಿಗೆ ಬಿದ್ದಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು. ಪೊಲೀಸರು ಎಲ್ಲೆoದರಲ್ಲಿ ಗಾಳಿಪಟ ಹರಿಸುವುದಕ್ಕೆ ಕಡಿವಾಣ ಹಾಕಬೇಕಿದೆ.
