ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ 30,(43) ರಲ್ಲಿ 1.60 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಭೂಮಿ ಪೂಜೆ ಚಾಲನೆ ನೀಡಿದರು.
ಮಹಾನಗರ ಪಾಲಿಕೆಯ 1 ಕೋಟಿ ರೂಪಾಯಿ ಅನುದಾನದಲ್ಲಿ ವೆಂಕಟೇಶ ಕಾಲೊನಿಯಿಂದ ಸ್ವಾಗತ ಕಾಲೂನಿ ಹನುಮಂತ ದೇವರ ಗುಡಿವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು. 50 ಲಕ್ಷ ವೆಚ್ಚದಲ್ಲಿ ಸುಂದರಟೌನ್ ಲಕ್ಷ್ಮೀ ಎಸ್ಟೇಟ್ ಹಾಗೂ ಸನ್ ಸಿಟಿ ಹೆರಿಟೇಜಿನಿಂದ ಜಿ.ಪಂ.ರಸ್ತೆವರೆಗೆ ಒಳಚರಂಡಿ ನಿರ್ಮಾಣ. 10 ಲಕ್ಷ ವೆಚ್ಚದಲ್ಲಿ ನಕ್ಷತ್ರ ಕಾಲೂನಿ ಪಾತ್-ವೇ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ.
ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಮುಖಂಡರಾದ ಮಲ್ಲಿಕಾರ್ಜುನ ಸವಕಾರ, ಬಿ.ಎನ್ . ಖಂಡೇಕಾರ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.