ಹುಬ್ಬಳ್ಳಿ : ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿದಂತೆ ವಿವಿಧ ವಿವಿಧ ಅಸಂಘಟಿತ ವಲಯ ಕಾರ್ಮಿಕರಿಗೆ ಇಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಪುಡ್ ಕಿಟ್ ವಿತರಣೆ ಮಾಡಿದರು.
ಪಿರಾಮಿಡ್ ಧ್ಯಾನ ಮಂದಿರದ
ಆಯೋಜಿಸಲಾದ ಕಾರ್ಯಕಮದಲ್ಲಿ 150 ಕಟ್ಟಡ ಕಾರ್ಮಿಕರಿಗೆ ಹಾಗೂ ವಿದ್ಯಾನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮದಲ್ಲಿ
ಬಂಗಾರ ಕೆಲಸ ಮಾಡುವ ಕಾರ್ಮಿಕರಿಗೆ ಆಹಾರಧಾನ್ಯದ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಕರ್ನಾಟಕ ಮಾರ್ಜಕ ನಿಯಮಿತದ ನಿರ್ದೇಶಕ ಮಲ್ಲಿಕಾರ್ಜುನ ಸವಕಾರ, ಕಾರ್ಮಿಕ ಆಯುಕ್ತ ಮಲ್ಲಿಕಾರ್ಜುನ ಎಸ್, ಕಾರ್ಮಿಕ ಅಧಿಕಾರಿ ಮಾರಿಕಾಂಬ ಹುಲಕೋಟಿ, ಹಿರಿಯ ಕಾರ್ಮಿಕ ನಿರೀಕ್ಷಕಿ ಸಂಗೀತಾ ಬೆನಕೊಪ್ಪ ಮುಖಂಡರುಗಳಾದ ಈಶ್ವರ್ ಗೌಡ ಪಾಟೀಲ್, ವಿರುಪಾಕ್ಷ ರಯನಗೌಡರ್, ವಿಶ್ವನಾಥ್ ಪಾಟೀಲ್, ವಿನೋದ್ ರೇವಣಕರ್, ರಾಜೇಶ್ ಗಾವ್ಕರ್ ಉಪಸ್ಥಿತರಿದ್ದರು.