ಹುಬ್ಬಳ್ಳಿ : ರಮೇಶ ಜಾರಕಿಹೊಳಿ ಅವರು ಯಾವುದೇ ಉದ್ವೇಗದಲ್ಲಿ ರಾಜೀನಾಮೆ ಬಗ್ಗೆ ಹೇಳಿದ್ದಾರೆ. ಅವರ ಜೊತೆ ನಾವಿದ್ದೇವೆ. ಸಣ್ಣಪುಟ್ಟ ತೊಂದರೆ ಆಗಿದ್ದು, ಅವೆಲ್ಲವೂ ಶೀಘ್ರದಲ್ಲೇ ಬಗೆಹರಿಯಲಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಶ್ನೆಯೇ ಇಲ್ಲ. ರಮೇಶ ಜಾರಕಿಹೊಳಿ ಅವರ ಜೊತೆ ಹಿಂದೆಯೂ ಇದ್ದೇವು, ಮುಂದೆಯೂ ಅವರ ಜೊತೆಗೆ ಇರುತ್ತೇವೆ. ಎಸ್.ಐ.ಟಿ ತನಿಖೆ ಪ್ರಕರಣ ನಡೆಯುತ್ತಿದೆ. ಏನೂ ತಿರ್ಮಾಣ ಆಗುತ್ತೋ ನೋಡೋಣ ಎಂದರು.
*ಅತ್ಯುತ್ತಮ ನಗರವಾಗಲಿದೆ ಹು-ಧಾ: ಹು-ಧಾ ಮಹಾನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಶೇ.25 ರಿಂದ 30 ರಷ್ಟು ಕಾಮಗಾರಿ ಬಾಕಿ ಇದೆ. ಈಗಾಗಲೇ ಅಧಿಕಾರಿಗಳಿಗೆ ಒಂದು ತಿಂಗಳ ಗಡುವು ನೀಡಿದ್ದು, ಎಲ್ಲೆಲ್ಲಿ ನಿಧಾನಗತಿಯಲ್ಲಿ ಕೆಲಸ ನಡೆಯುತ್ತಿದೆ ಅದನ್ನು ಹೆಚ್ಚು ಕಾರ್ಮಿಕರನ್ನು ಬಳಕೆ ಮಾಡಿ ಶೀಘ್ರವಾಗಿ ಮುಗಿಸಲು ಸೂಚಿಸಿದ್ದೇನೆ. ಹು-ಧಾ ಮಹಾನಗರ ಪಾಲಿಕೆಯವರು 240 ಕೋಟಿ ರೂಪಾಯಿ ಪ್ರಸ್ತಾವನೆ ಸಹ ಈಗಾಗಲೇ ಕೊಟ್ಟಿದ್ದು, ಸಿಎಂ ಜೊತೆಗೆ ಮಾತನಾಡಿ ಹಣ ಬಿಡುಗಡೆಗೆ ಪ್ರಯತ್ನ ಮಾಡುತ್ತೇನೆ. ಮುಂದಿನ ದಿನಮಾನಗಳಲ್ಲಿ ಹು-ಧಾ ನಗರಗಳು ರಾಜ್ಯದ ಅತ್ಯುತ್ತಮ ನಗರಗಳಾಗಿ ಹೊರಹೊಮ್ಮಲಿದೆ ಎಂದರು.