ಹುಬ್ಬಳ್ಳಿ : ನಗರದ ಹೆಗ್ಗೇರಿ ಆಯುರ್ವೇದಿಕ್ ಕಾಲೇಜಿನ ಹೆಸರಲ್ಲಿ ನಕಲಿ ಖಾತೆ ತೆರದು 24 ಲಕ್ಷ ರೂಪಾಯಿಯನ್ನ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಆಯುರ್ವೇದಿಕ್ ಕಾಲೇಜಿನ ಹೆಸರಿನಲ್ಲಿ ನಕಲಿ ಬ್ಯಾಂಕ್ ತೆರೆದಿರುವ ಹಿಂದುಳಿದ ವರ್ಗದ ಇಲಾಖೆಯ ಸಿಬ್ಬಂದಿಯು, ವಿದ್ಯಾರ್ಥಿ ವೇತನವನ್ನ ನಕಲಿ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾನೆ. 2017-18ರಲ್ಲಿನ ಪ್ರಕರಣ ಇದಾಗಿದ್ದು, ಹಿಂದುಳಿದ ವರ್ಗದ ವಿದ್ಯಾರ್ಥಿ ವೇತನ ಕಾಲೇಜಿನ ಪ್ರಾಚಾರ್ಯರ ಖಾತೆಗೆ ಜಮಾ ಮಾಡುವ ಬದಲು, ನಕಲಿ ಖಾತೆಗೆ ಜಮಾ ಮಾಡಿ ವಂಚನೆ ಮಾಡಲಾಗಿದೆ. ವಿದ್ಯಾರ್ಥಿಗಳ ಒಟ್ಟು 24 ಲಕ್ಷ ರೂಪಾಯಿ 4090ರೂಪಾಯಿಯ ವಂಚನೆ ಆಗಿದೆ ಎಂದು ದೂರು ನೀಡಲಾಗಿದೆ ಎಂದು ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲರು ಪ್ರಶಾಂತ. ಎ ಹೇಳಿದರು.
Hubli News Latest Kannada News