ಹುಬ್ಬಳ್ಳಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಇಲ್ಲಿನ ಗಾಂಧಿವಾಡ ವಲಯ ನಾಗಶೆಟ್ಟಿಕೊಪ್ಪದ ಮಿನಾಜ್ ಕಮಡೊಳ್ಳಿ ಅವರ ಮಗು ಅಪೌಷ್ಟಿಕತೆಯಿಂದ ಬಳಲತ್ತಿದ್ದ ಹಿನ್ನೆಲೆಯಲ್ಲಿ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾ ಅಧಿಕಾರಿ ಡಾ.ಕಮಲಾ ಬೈಲೂರ ಮಗುವಿಗೆ ಪೂರಕ ಪೌಷ್ಟಿಕ ಆಹಾರ ಒದಗಿಸಿ, ಮಗುವಿನ ಪೌಷ್ಟಿಕಾಹಾರದ ಮಹತ್ವ ಹಾಗೂ ಕಾಳಜಿ ಕುರಿತು ಜಾಗೃತಿ ಮೂಡಿಸಿದರು..
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯೆ ಮೇನಕಾ ಹುರಳಿ, ವಲಯ ಮೇಲ್ವೀಚಾರಕಿ ಸವಿತಾ ಬದ್ದಿ ಹಾಗೂ ಅಂಗವಾಡಿ ಕಾರ್ಯಕರ್ತರು ಸೇರಿದಂತೆ ಮುಂತಾದವರು ಇದ್ದರು
Hubli News Latest Kannada News