Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಹುಬಳ್ಳಿಯಲ್ಲಿ ಪುನೀತ್ ರಾಜ್‍ಕುಮಾರ್ ನುಡಿನಮನ ಸರ್ಕಾರ ಆಯೋಜಿಸಬೇಕೆಂದು ಶಿವಾನಂದ ಮುತ್ತಣ್ಣವರ ಒತ್ತಾಯ

ಹುಬಳ್ಳಿಯಲ್ಲಿ ಪುನೀತ್ ರಾಜ್‍ಕುಮಾರ್ ನುಡಿನಮನ ಸರ್ಕಾರ ಆಯೋಜಿಸಬೇಕೆಂದು ಶಿವಾನಂದ ಮುತ್ತಣ್ಣವರ ಒತ್ತಾಯ

Spread the love

ಹುಬ್ಬಳ್ಳಿ: ರಾಜ್ಯ ಸರ್ಕಾರ ಪುನೀತ್ ರಾಜ್‍ಕುಮಾರ್ ಅವರಿಗೆ ನುಡಿನಮನ ಸಲ್ಲಿಸಲು ಹುಬ್ಬಳ್ಳಿಯಲ್ಲಿ “ಪುನೀತ್ ನೆನಪು” ಕಾರ್ಯಕ್ರಮ ಆಯೋಜಿಸಬೇಕೆಂದು ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಮುಖ್ಯಸ್ಥ ಶಿವಾನಂದ ಮುತ್ತಣ್ಣವರ ಒತ್ತಾಯಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಇಡೀ ಕರುನಾಡನ್ನು ಆಘಾತಕ್ಕೆ ತಳ್ಳಿದೆ ಪುನೀತ್ ರಾಜಕುಮಾರ್ ಅಕಾಲಿಕ ನಿಧನ. ಸಾವಿರಾರು ಅಭಿಮಾನಿಗಳು ಇಂದಿಗೂ ಆ ಶಾಕ್‌ನಿಂದ ಹೊರ ಬಂದಿಲ್ಲ ಕುಟುಂಬದ ಪರಿಸ್ಥಿತಿಯೂ ಹಾಗೆ ಇದೆ. ಅವರಿಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನುಡಿ ನಮನ ಸಲ್ಲಿಸಿದ್ದು, ಅದರಂತೆ ಹುಬ್ಬಳ್ಳಿಯಲ್ಲಿ ಕನಿಷ್ಠ 3 ಲಕ್ಷ ಅಭಿಮಾನಿಗಳ ಸಮ್ಮುಖದಲ್ಲಿ ಪುನೀತ್ ನೆನಪು ಕಾರ್ಯಕ್ರಮವನ್ನು ಸರ್ಕಾರ ಡಿಸೆಂಬರ್ ಅಂತ್ಯದೊಳಗೆ ಆಯೋಜಿಸಬೇಕು. ಇಲ್ಲವಾದರೆ ಸಿಎಂ ನಿವಾಸದ ಎದುರು ಧರಣಿ ನಡೆಸಲಾಗುವುದು ಎಂದರು.

ಮರಣೋತ್ತರವಾಗಿ ಪವಾರ್ ಸ್ಟಾರ್ ಪುನೀತ್ ರಾಜಕುಮಾರ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೊಡಲು ತೀರ್ಮಾನಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಉತ್ತರ ಕರ್ನಾಟಕ ಹಾಗೂ ಹುಬ್ಬಳ್ಳಿಯ ಸಮಸ್ತ ಪುನೀತ್ ಅಭಿಮಾನಿಗಳ ವತಿಯಿಂದ ಧನ್ಯವಾದ ತಿಳಿಸುವೆ ಎಂದರು.

About Santosh Naregal

Check Also

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …

Leave a Reply

Your email address will not be published. Required fields are marked *

[the_ad id="389"]