ಹುಬ್ಬಳ್ಳಿ :ಪರಿಷತ್ ಚುನಾವಣೆಯಲ್ಲಿ ಅತೀಹೆಚ್ಚು ಸ್ಥಾನ ಗೆಲ್ಲಲಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಇದೇ ನನ್ನ ಸವಾಲ್ ಎಂದು ಸಚಿವ ಶ್ರೀರಾಮುಲು ಹೇಳಿದರು.
ಹುಬ್ಬಳ್ಳಿಯ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, 25 ಸ್ಥಾನಗಳಲ್ಲಿ 15 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ.
ಆ ಮೂಲಕ ಹೊಸ ಇತಿಹಾಸವನ್ನ ಬರೆಯುತ್ತೇವೆ ಎಂದರು.
ಕಾಂಗ್ರೆಸ್ ನಾಯಕರು ಕೇವಲ ಚುನಾವಣೆ ಇದ್ದಾಗ ಮಾತ್ರ ಕಾಣುತ್ತಾರೆ. ಆಮೇಲೆ ಎಲ್ಲೂ ಸಹ ಅವರು ಕಾಣೋದಿಲ್ಲ.
ಕಾಂಗ್ರೆಸ್ ನ ಲೀಡರ್ ಗಳು ಪಾರ್ಟ್ ಟೈಮ್ ಲೀಡರ್ ಇದ್ದಹಾಗೆ. ನಮ್ಮ ಪ್ರಧಾನಿ ಪಾರ್ಟ್ ಟೈಮ್ ಅಲ್ಲ ಫುಲ್ ಟೈಮ್ ಲೀಡರ್.ಹಿಂದುಳಿದವರನ್ನ ಕಾಂಗ್ರೆಸ್ ಕಡೆಗಣಿಸಿ ಹಾಗೆ ಬಿಜೆಪಿ ಮಾಡಿಲ್ಲ. ಕಾಂಗ್ರೆಸ್ ಹಗರಣದ ರಾಜಕಾರಣ ಮಾಡುತ್ತಾ ಬಂದಿದೆ ಎಂದರು.
ಇಡೀ ದೇಶ ಕಲ್ಲಿದ್ದಲು ಸಮಸ್ಯೆಯಿಂದ ಕತ್ತಲಲ್ಲಿ ಮುಳುಗುತ್ತೆ ಅಂತ ಕಾಂಗ್ರೆಸ್ ನವರು ಹೇಳ್ತಿದ್ರು.
ಕಲ್ಲಿದ್ದಲು ಸಮಸ್ಯೆಯನ್ನ ಒಂದೇ ದಿನದಲ್ಲಿ ಬಗೆಹರಿಸಿದ್ದಾರೆ.
ಕಾಂಗ್ರೆಸ್ ಯಾವಾಗ ಅಧಿಕಾರಕ್ಕೆ ಬರುತ್ತೋ ಅವಗೆಲ್ಲಾ ಹಗರಣ ಮಾಡುತ್ತಾ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಜಾಹಿರಾತು…