ಧಾರವಾಡ: ಮದುವೆಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ಸೊಂದು ಬ್ರೇಕ್ ಫೇಲ್ ಆಗಿ ಪಕ್ಕದಲ್ಲಿದ್ದ ಗೋಡೆಗೆ ಗುದ್ದಿರುವ ಘಟನೆ ಬುಧವಾರ ಇಲ್ಲಿನ ನವಲೂರು ಬ್ರಿಜ್ ಬಳಿ ನಡೆದಿದೆ.
ಕೊಪ್ಪಳ ಡಿಪೋದ ಸಾರಿಗೆ ಸಂಸ್ಥೆ ಬಸ್ಸು ಇದಾಗಿದ್ದು, ಹುಬ್ಬಳ್ಳಿ ಕಡೆಗೆ ಮದುವೆಗೆಂದು ಹೊರಟಿತ್ತು. ನವಲೂರು ಬಳಿ ಬರುತ್ತಿದ್ದಂತೆ ಬಸ್ಸಿನ ಬ್ರೇಕ್ ಫೇಲ್ ಆಗಿದ್ದು, ಕೂಡಲೇ ಎಚ್ಚೆತ್ತುಕೊಂಡ ಚಾಲಕ ಬಸ್ಸನ್ನು ಮುಖ್ಯ ರಸ್ತೆ ಬಿಟ್ಟು ಪಕ್ಕದ ರಸ್ತೆಗೆ ತೆಗೆದುಕೊಂಡು ಬ್ರಿಜ್ ತಡೆಗೋಡೆಗೆ ಡಿಕ್ಕಿಪಡಿಸಿದ್ದಾನೆ. ಇದರಿಂದ ಮುಂದಾಗುವ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಇನ್ನು ಬಸ್ಸಿನಲ್ಲಿ 50 ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮೂರ್ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಧಾರವಾಡ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಾಹಿರಾತು…