ಹುಬ್ಬಳ್ಳಿ : ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಪೂರ್ವಭಾವಿಯಾಗಿ ಜನ ಸ್ವರಾಜ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡ ಗ್ರಾಮೀಣ ಬಿಜೆಪಿ ಅಧ್ಯಕ್ಷ ಬಸವರಾಜ ಕುಂದಗೋಳಮಠ ಹೇಳಿದ್ದಾರೆ..
ಸುದ್ದಿಗೋಷ್ಠಿ ಮಾಡಿದ ಅವರು ಕರ್ನಾಟಕ ರಾಜ್ಯದಾದ್ಯಂತ ಪ್ರಮುಖರ ನಾಲ್ಕು ತಂಡಗಳಾಗಿ ಸಮಾವೇಶ ನಡೆಯುತ್ತಿದ್ದು, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನ.19 ರಂದು ಜನ ಸ್ವರಾಜ ಸಮಾವೇಶ ನಗರದ ಶ್ರೀನಿವಾಸ್ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ..ಈ ಸಮಾವೇಶದಲ್ಲಿ ಗದಗ, ಧಾರವಾಡ, ಹಾವೇರಿ ಜಿಲ್ಲೆಗಳ ಮತದಾರರು ಭಾಗಿಯಾಗಲಿದ್ದಾರೆ ಅಂತ ಅವರು ಹೇಳಿದ್ರು.
ಈ ಸಮಾವೇಶದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶ್ರೀರಾಮುಲು, ಗೋವಿಂದ ಕಾರಜೋಳ, ತೇಜಸ್ವಿ ಅನಂತಮೂರ್ತಿ, ಎಂ.ಬಿ ನಂದೀಶ ಭಾಗವಹಿಸುವರು.
ವಿಧಾನ ಪರಿಷತ್ ಚುನಾವಣೆ ಗ್ರಾಮ ಪಂಚಾಯತಿ ಸದಸ್ಯ ಹಕ್ಕು ಪಡೆದಿದ್ದು, ಅವರನ್ನು ಸೇಳೆಯಲು ಈ ಹಿಂದೆ ಗ್ರಾಮ ಸ್ವರಾಜ್ ಸಮಾವೇಶ ಮಾಡಿ ಎಲ್ಲಾ ಗ್ರಾಪಂ ಸದಸ್ಯರಿಗೆ ಸನ್ಮಾನಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿತ್ತು.
ಜಿಲ್ಲೆಯಲ್ಲಿ ಒಟ್ಟು 144 ಗ್ರಾಮ ಪಂಚಾಯತಿಗಳಿದ್ದು, ಅದರಲ್ಲಿ 8 ಗ್ರಾಮ ಪಂಚಾಯತಿ ಚುನಾವಣೆ ನಡೆಯಬೇಕಿದೆ. ಈಗ 136 ಗ್ರಾಪಂ ಚುನಾವಣೆಯಾಗಿದೆ. ಒಟ್ಟು ಗ್ರಾಪಂ 1952 ಸದಸ್ಯರಿದ್ದು ಅದರಲ್ಲಿ ಬಿಜೆಪಿ ಬೆಂಬಲಿತ 1216 ಸದಸ್ಯರಿದ್ದಾರೆ. ವಿಧಾನ ಪರಿಷತ್ ಚುನಾವಣೆಗೆ 1400 ಸದಸ್ಯರ ಮತ ಪಡೆದು ಪಡೆದು ಬಿಜೆಪಿಗೆ ಜಯ ಸಾಧಿಸುವ ವಿಶ್ವಾಸ ವ್ಯಕ್ತ ಪಡಿಸಿದ್ದರು.
ಜಾಹಿರಾತು…