Home / Top News / ಚಿಟಗುಪ್ಪಿ ಆಸ್ಪತ್ರೆಯಲ್ಲಿ ಲಾಕರ್ ಪತ್ತೆ: ಅಧಿಕಾರಿಗಳ ನೇತೃತ್ವದಲ್ಲಿ ತೆರವಿಗೆ ಜನರ ಒತ್ತಾಯ

ಚಿಟಗುಪ್ಪಿ ಆಸ್ಪತ್ರೆಯಲ್ಲಿ ಲಾಕರ್ ಪತ್ತೆ: ಅಧಿಕಾರಿಗಳ ನೇತೃತ್ವದಲ್ಲಿ ತೆರವಿಗೆ ಜನರ ಒತ್ತಾಯ

Spread the love

ಹುಬ್ಬಳ್ಳಿ: ಇತಿಹಾಸ ಪ್ರಸಿದ್ದ ಚಿಟಗುಪ್ಪಿ ಆಸ್ಪತ್ರೆಯು ಶಿಥಿಲಾವಸ್ಥೆ ತಲುಪಿದ ಹಿನ್ನೆಲೆಯಲ್ಲಿ ತೆರವುಗೊಳಿಸಿ ಕಾರ್ಯಾಚರಣೆ ಆರಂಭವಾಗಿದೆ. ಇದರ ಬೆನ್ನಲ್ಲೇ ಆಸ್ಪತ್ರೆಯ ಗೋಡೆಗಳಲ್ಲಿ ಒಂದು ಲಾಕರ್ ಪತ್ತೆಯಾಗಿದ್ದು, ಇದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಮೊದಲೇ ಸುದೀರ್ಘ 127 ವರ್ಷದ ಈ ಕಟ್ಟಡ ಬ್ರಿಟಿಷ್ ರ ಕಾಲದಾಗಿದ್ದೆ, ರಾವ್ ಬಹದ್ದೂರ್ ಶ್ರೀನಿವಾಸ ಬಾಲಾಜಿ ಚಿಟಗುಪ್ಪಿ ಅವರು ಜನರಿಗೆ ಅನುಕೂಲವಾಗಲೆಂದು 1894 ರಲ್ಲಿ ಔಷಧಾಲಯ ಎಂಬ ಹೆಸರಿನಲ್ಲಿ ಪ್ರಾರಂಭಿಸಿದ್ದಾರೆ. ನಂತರ 1936 ರಲ್ಲಿ ಆಸ್ಪತ್ರೆಯಾಗಿ ಬದಲಾಗಿರುವುದು ಇತಿಹಾಸವಾಗಿದೆ. ಆದರೆ ಇದೀಗ ಈ ಪುರಾತನ ಕಟ್ಟಡದಲ್ಲಿ ಅಂದಿನಿಂದ ಇಂದಿನವರೆಗೆ ಲಕ್ಷಾಂತರ ರೋಗಿಗಳಿಗೆ ಆರೈಕೆ ಮಾಡಲಾಗಿದೆ. ಈ ದಿಸೆಯಲ್ಲಿ ಕಟ್ಟಡದಲ್ಲಿ ಲಾಕರವೊಂದು ಪತ್ತೆಯಾದ ಬೆನ್ನಲ್ಲೇ ಅದರಲ್ಲಿ ಪ್ರಾಚೀನ ಔಷಧಿಗಳಿಗೆ ಸಂಬಂಧಿಸಿದ ವಸ್ತುಗಳು, ಇಲ್ಲದೇ ನಗ, ನಾಣ್ಯಗಳಿಗೆಯೇ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಮಾತನಾಡಿಸಿದರೇ ಲಾಕರ್ ತುಂಬಾ ಹಳೆಯದ್ದು, ಅದರ ಕೀಲಿಯೂ ಇಲ್ಲ. ನಾವು ಅದನ್ನು ತೆಗೆದುಇಲ್ಲ ಎಂದು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಲಾಕರ್ ನ್ನು ಜಿಲ್ಲಾಧಿಕಾರಿಗಳು, ಪುರಾತತ್ವ ಇಲಾಖೆಯ ಅಧಿಕಾರಿ ಸೇರಿದಂತೆ ಮೇಲಾಧಿಕಾರಿಗಳ ಸಮ್ಮುಖದಲ್ಲಿ ತೆರೆದು ಲಾಕರ್ ನಲ್ಲಿ ಏನಿದೆ ಎಂಬುದನ್ನು ಸಾರ್ವಜನಿಕವಾಗಿ ತಿಳಿಸಬೇಕೆಂಬುದು ಜನರ ಆಶಯವಾಗಿದೆ.

 

ಜಾಹಿರಾತು…

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]