ಹುಬ್ಬಳ್ಳಿ- ಇಂದು ಬ್ರಾಹ್ಮೀ ಮುಹೂರ್ತದಲ್ಲಿ, ನಗರದ ವೀರಾಪುರ ಓಣಿಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಗ್ರಾಮದೇವಿ ದೇವಸ್ಥಾನದ ಲೋಕಾರ್ಪಣೆ ಹಾಗೂ ಶ್ರೀ ಗ್ರಾಮದೇವತೆಯರಾದ ಶ್ರೀ ದ್ಯಾಮವ್ವ, ದುರ್ಗಮ್ಮದೇವಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮವನ್ನು ಭಕ್ತರು ಅದ್ಧೂರಿಯಾಗಿ ಆಚರಣೆ ಮಾಡಿದರು.
ದೇವಸ್ಥಾನದಲ್ಲಿ ಗಣಹೋಮ ವಾಸ್ತು ಹೋಮ, ನವಗ್ರಹ ಹೋಮ , ಶಾಂತಿ ಹೋಮ, ಹವನ ಮೂಲಕ ವಿಶೇಷ ಪೂಜೆಯನ್ನು ಮಾಡಲಾಯಿತು. ಗಾಳಿದುರ್ಗಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಶ್ರೀ ಗ್ರಾಮ ದೇವತೆಯರ ಮೂರ್ತಿಯ ಮಹಾಪೂಜೆ, ಸುಮಂಗಲೆಯರಿಂದ ಪೂರ್ಣ ಕುಂಭ ಮೇಳ, ಹಾಗೂ ಸಕಲ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ಮುಖಾಂತರ ಶ್ರೀ ಗ್ರಾಮದೇವತೆಯರ ಮೂರ್ತಿಯನ್ನು ದೇವಸ್ಥಾನಕ್ಕೆ ತರಲಾಯಿತು.