ಸೋಲು ಗೆಲುವು ಸಮಾನವಾಗಿ ತಗೆದುಕೊಳ್ಳುತ್ತೇವೆ- ತಪ್ಪು ತಿದ್ದಿಕೊಂಡು ಮುಂದೆ ಸಾಗುತ್ತೇವೆ- ಸಚಿವ ಶಂಕರಪಾಟೀಲ್ ಮುನೇನಕೊಪ್ಪ
ಹುಬ್ಬಳ್ಳಿ : ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಅನ್ನೋದು ಸಾಮಾನ್ಯ.
ಇದು ಮತದಾರರು ಕೊಟ್ಟಂತಹ ನಿರ್ಣಯ ಅದನ್ನ ನಾವು ಸ್ವಾಗತ ಮಾಡುತ್ತೇವೆ ಎಂದು
ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಹಾನಗಲ್ ಉಪಚುನಾವಣೆಯಲ್ಲಿ
ನಾವು ಎಲ್ಲಿ ಎಡವಿದ್ದೇವೆ ಅನ್ನೋದನ್ನ ಪರಾಮರ್ಶೆ ಮಾಡಿಕೊಳ್ಳುತ್ತೇವೆ.
ಈ ಬಾರಿ ಸೋಲು ಅನುಭವಿಸಿದ ಕ್ಷೇತ್ರಗಳಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತೇವೆ.
ನಮ್ನ ಅಭ್ಯರ್ಥಿ ಬಗ್ಗೆ ಅಪಸ್ವರ ಇತ್ತೋ ಏನೋ ಗೊತ್ತಿಲ್ಲ.
ಹಾನಗಲ್ ಕ್ಷೇತ್ರದಲ್ಲಿ ನಮ್ಮನ್ನ ತಿರಸ್ಕಾರ ಮಾಡಿದ್ದಾರೆ.
ಈ ಸೋಲನ್ನ ನಾವು ಒಪ್ಪಿ ಸ್ವಾಗತ ಮಾಡುತ್ತೇವೆ ಎಂದರು.
ಪಕ್ಷ ಸೂಚಿಸಿದ ಅಭ್ಯರ್ಥಿ ಪರ ನಾವೆಲ್ಲ ಕೆಲಸ ಮಾಡಿದ್ದೇವೆ.
ಮುಂದಿನ ಬಾರಿ ಗೆಲುವು ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
ಇದು ಸಿಎಂಗೆ ಮುಖಭಂಗ ಅಲ್ಲ, ಸೋಲು ಗೆಲುವು ಸಾಮಾನ್ಯ. ಇದು ಸಿಎಂ ಗೆ ಸೋಲಲ್ಲ ಬಿಜೆಪಿಯ ಸೋಲು ಎಂಬ ಡಿಕೆಶಿ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,
ಡಿಕೆಶಿಯವರು ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಉತ್ಸಾಹದಿಂದ ಮಾತನಾಡುತ್ತಿದ್ದಾರೆ.
ಸಿಂಧಗಿಯಲ್ಲಿ ಅವರನ್ನ ತಿರಸ್ಕಾರ ಮಾಡಿದ್ದಾರೆ.
ದೇಶದ ಅನೇಕ ರಾಜ್ಯಗಳಲ್ಲಿ ನಾವು ಗೆಲುವು ಸಾಧಿಸಿದ್ದೇವೆ.
ಎರಡೂ ಕ್ಷೇತ್ರದ ಜನರ ತೀರ್ಮಾನವನ್ನ ನಾವು ಸ್ವಾಗತ ಮಾಡುತ್ತೇವೆ.ಮುಂದಿನ ಚುನಾವಣೆಯಲ್ಲಿ ಗೆಲುವುನಸಾಧಿಸುವ ಮೂಲಕ ಉತ್ತಮ ಸಂದೇಶ ನೀಡಲಿದ್ದೇವೆ ಎಂದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಲಾಗುವದು ಎಂದರು.

Hubli News Latest Kannada News