ಹುಬ್ಬಳ್ಳಿ- ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆದರೆ ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿದರೆ ಸಾಕು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ ಆಯುಕ್ತ ಲಾಬೂರಾಮ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ದೀಪಾವಳಿ ಹಿನ್ನೆಲೆ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿಲ್ಲ. ಏನಾದರೂ ಈ ತರಹದ ಘಟನೆಗಳು ಯಾವುದೇ ಮೂಲೆಯಲ್ಲಿ ನಡೆದರೆ ಸಾರ್ವಜನಿಕರು ಡಿಸಿಪಿ, ಪೊಲೀಸ್ ಇನ್ಸ್ಪೆಕ್ಟರ್ ಗಳಿಗೆ ತಿಳಿಸಿದರೆ ಸಾಕು ಕ್ರಮ ಜರುಗಿಸಲಾಗುವುದು ಎಂದರು.
ಗಾಂಜಾ ಹಾವಳಿ ಹೆಚ್ಚಾಗುತ್ತಿರುವ ವಿಷಯವಾಗಿ ಮಾತನಾಡಿದ ಅವರು, ಗಾಂಜಾ ಮಾರಾಟದ ಕುರಿತು ಎಲ್ಲಿ ಎಲ್ಲಿ ಮಾಹಿತಿ ಬರತ್ತಿದೆ ಅಲ್ಲಿ ಕ್ರಮ ಜರುಗಿಸಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ತಿಳಿಸಿದ್ದೇನೆ ಎಂದರು.